ಹೊಸದಿಗಂತ ವರದಿ ಶಿವಮೊಗ್ಗ :
ದಕ್ಷಿಣ ಭಾರತದಲ್ಲಿಯೇ ಕರ್ನಾಟಕ ಬಿಜೆಪಿ ಹೆಬ್ಬಾಗಿಲೆಂಬ ಹೆಗ್ಗಳಿಕೆ ಇದೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಯತ್ನಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದ್ದು, ಸದಸ್ಯತ್ವ ಅಭಿಯಾನ ನಡೆಲಾಗುತ್ತಿದೆ. ಪಕ್ಷದ ಹಿತದೃಷ್ಡಿಯಿಂದ ಎಲ್ಲವನ್ನು ನುಂಗಿಕೊಂಡು ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದೇನೆ. ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂಬುದನ್ನು ಒಪ್ಪುವುದಿಲ್ಲ. ಯಡಿಯೂರಪ್ಪ ಮಗ ಎಂಬ ಹೆಮ್ಮೆ ಇದೆ.ಅಹಂಕಾರ ಇಲ್ಲ ಎಂದರು.
ಇಂದು ಪ್ರಧಾನಿ ಮೋದಿಯವರ ಜನ್ಮ ದಿನಚರಣೆ ಅವರಿಗೆ ಅಭಿನಂದಿಸುವುದಾಗಿ ಹೇಳಿದ ಅವರು, ಎನ್ ಡಿಎ ಮೂರನೇ ಬಾರಿ ಅಧಿಕಾರಕ್ಕೆ ಬಂದು 100 ದಿನ ಕಳೆದಿದೆ. ಕಳೆದ 10ವರ್ಷಗಳಲ್ಲಿ ಮೋದಿಯವರು ಮಹತ್ವದ ಸಾಧನೆ ಮಾಡಿದ್ದಾರೆ. ಕಳೆದ 100 ದಿನಗಳಲ್ಲಿಯೂ ಅಭಿವೃದ್ಧಿ ಗೆ ಬುನಾಧಿ ಹಾಕಿದ್ದಾರೆ. 2047 ಕ್ಕೆ ವಿಕಸಿತಭಾರತ ಹೇಗೆ ಮಾಡಬೇಕೆಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಬಡವರ ಸಬಲೀಕರಣಕ್ಕೆ ದಾಪುಗಾಲು ಹಾಕಿದ್ದಾರೆ. 15 ಸಾವಿರ ಕೋಟಿ ರೂ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.