ಹೊಸದಿಗಂತ ಡಿಜಿಟಲ್ ಡೆಸ್ಕ್;
ನ್ಯಾಯಾಲಯಗಳು ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯಿಂದ ದೂರ ಸರಿಯುವ ಪ್ರಯತ್ನ ಮಾಡಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಹೇಳಿದ್ದಾರೆ.
ದೆಹಲಿ ಜಿಲ್ಲಾ ನ್ಯಾಯಾಂಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ವಿಚಾರಣೆಯನ್ನು ಮುಂದೂಡುವ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಬೇಕಾಗಿದೆ. ದೇಶದ ಎಲ್ಲಾ ನ್ಯಾಯಾಧೀಶರು ನ್ಯಾಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.
ನ್ಯಾಯಾಲಯದ ಪ್ರಕ್ರಿಯೆಗಳಿಂದ ಜನರಲ್ಲಿ ಒತ್ತಡ ಹೆಚ್ಚಾಗುತ್ತದೆ .ಈ ವಿದ್ಯಮಾನವು ‘ಬ್ಲ್ಯಾಕ್ ಕೋಟ್ ಸಿಂಡ್ರೋಮ್’ ಆಗಿದೆ ಎಂದರು. ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.
ಹೌದು, ಗೌರವಾನ್ವಿತ ಅಧ್ಯಕ್ಷ ರು ಹೇಳಿದಂತೆ ನ್ಯಾಯಾಲಯ ಗಳಲ್ಲಿ ವಿಚಾರಣೆಯನ್ನು ವಿನಾ ಕಾರಣ ಮುಂದೂಡುವ ದುರಬ್ಯಾಸ ಪ್ರಕ್ರಿಯೆಯನ್ನು ಕೊಡ್ ಆಫ್ ಸಿವಿಲ್ ಪ್ರಕ್ರಿಯೆಯಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಬೆಕಾಗಿದೆ, ಕಕ್ಷಿದಾರ ರು ನ್ಯಾಯಾಲಯ ಗಳ ಬಗ್ಗೆ ತಿರಸ್ಕಾರದ ಮನೋಭಾವ ಹೊಂದಿದ್ದಾರೆ
ಸತ್ಯವಾದ ಮಾತು ನ್ಯಾಯಾಲಯಗಳಿಗೆ ತಿರುಗುವುದೆಂದರೆ ಅಸಮಾಧಾನ ಎಲ್ಲಾ ಸಾಕ್ಷ ಆಧಾರಗಳು ಸರಿಯಾಗಿ ಇದ್ದರೂ ತೀರ್ಪನ್ನು ಕೊಡಲು ನ್ಯಾಯಾಧೀಶರುಗಳು ಅಸಮರ್ಥ ಆಗಿದ್ದಾರೆ ವಕೀಲರುಗಳಿಗೆ ಉದ್ಯೋಗ ಕೊಡುವ ಉದ್ದೇಶವಿರಬೇಕು ನ್ಯಾಯಾಧೀಶರುಗಳ ನಡುವಳಿಕೆ