ದೇಶಾದ್ಯಂತ ಸಂಭ್ರಮದ ಬೆಳಕಿನ ಹಬ್ಬ, ಎಲ್ಲರ ಮನೆ-ಮನ ಬೆಳಗಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೀಪಗಳ ಬೆಳಕಿನ ಸಾಲಿನಲ್ಲಿ ಕತ್ತಲೆಯನ್ನು ಓಡಿಸಿ ಜ್ಞಾನವೆಂಬ ಬೆಳಕನ್ನು ಹರಿಸುವ ದೀಪಾವಳಿಯ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದನ್ನು ಗೆಲ್ಲುವುದು, ಕತ್ತಲೆಯ ಮೇಲೆ ಬೆಳಕು ಚೆಲ್ಲುವುದು, ಸುಳ್ಳಿನ ಮೇಲೆ ಸತ್ಯವನ್ನು ಗೆಲ್ಲುವುದು. ಅಮಾವಾಸ್ಯೆಯ ಮೊದಲ ರಾತ್ರಿ ಹಿಂದೂ ಕ್ಯಾಲೆಂಡರ್ ತಿಂಗಳ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ.

ಬೆಳಕಿನ ಹಬ್ಬಕ್ಕೆ ಹೊಸಬಟ್ಟೆ, ಸಹಿತಿನಿಸು ಹಣತೆಗಳ ವ್ಯಾಪಾರ ಭರಾಟೆ ಜೋರಾಗಿದ್ದು, ಬೆಳಗ್ಗೆಯಿಂದಲೇ ಪಟಾಕಿ ಸುಡುವ ಶಬ್ದವೂ ಜೋರಾಗಿದೆ.

https://twitter.com/i/status/1723549842511933653

ಉತ್ತರಪ್ರದೇಶ, ತಮಿಳುನಾಡು, ಕೇರಳ, ಗುಜರಾತ್‌, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ದೇವಾಲಯಗಳ ಮುಂದೆ ಶನಿವಾರ ರಾತ್ರಿಯಿಂದಲೇ ದೀಪೋತ್ಸವಗಳು ನಡೆಯುತ್ತಿವೆ.

ಹಬ್ಬಕ್ಕಾಗಿ ಸಿಹಿತಿಂಡಿಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮನೆಗಳ ಮುಂದೆ ಬಗೆಬಗೆಯ ರಂಗವಲ್ಲಿ, ತಳಿರು ತೋರಣಗಳು ಎಣ್ಣೆಸ್ನಾನಾದಿಗಳ ಮೂಲಕ ಹಬ್ಬವನ್ನು ಸ್ವಾಗತಿಸಲಾಗುತ್ತದೆ.  ಈ ದಿನದಂದು ಅಷ್ಟೈಶ್ವರ್ಯಕ್ಕಾಗಿ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸುವ ಹಬ್ಬವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!