ಹೊಸದಿಗಂತ ಡಿಜಿಟಲ್ ಡೆಸ್ಕ್:
ತರಬೇತಿ ವೇಳೆ ಯುಎಸ್ ಮಿಲಿಟರಿ ವಿಮಾನವೊಂದು ಪತನಗೊಂಡಿರುವ ಘಟನೆ ಪೂರ್ವ ಮೆಡಿಟರೇನಿಯನ್‌ನಲ್ಲಿ ನಡೆದಿದೆ.
ʻಪೂರ್ವ ಮೆಡಿಟರೇನಿಯನ್‌ನಲ್ಲಿ ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದ ಯುಎಸ್ ಮಿಲಿಟರಿ ವಿಮಾನವು ನವೆಂಬರ್ 10 ರ ಸಂಜೆ ಅಪಘಾತಕ್ಕೀಡಾಯಿತುʼ ಎಂದು ಯುಎಸ್ ಯುರೋಪಿಯನ್ ಕಮಾಂಡ್ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಪಘಾತದಿಂದಾಗಿ ವಿಮಾನ ಪತನಗೊಂಡಿದ್ದು, ಶತ್ರುಗಳ ದಾಳಿಯಿಂದಾಗಿ ಪತನಗೊಂಡಿರುವ ಯಾವುದೇ ಸೂಚನೆ ಇಲ್ಲ ಎಂದು ಹೇಳಿಕೆ ತಿಳಿಸಿದೆ.
ವಿಮಾನ ಪತನದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.