ಟಾಲಿವುಡ್​ನಲ್ಲೂ ಹೇಮಾ ಸಮಿತಿ ವರದಿ ಪ್ರಕಟವಾಗಲಿ: ನಟಿ ಸಮಂತಾ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಲಯಾಳಂ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದ ಹೇಮಾ ಸಮಿತಿ ವರದಿಯಿಂದ ಮಹಿಳೆಯರ ವಿರುದ್ಧ ಹಲವು ವರ್ಷಗಳಿಂದ ನಡೆಯುತ್ತ ಬಂದ ಲೈಂಗಿಕ ದೌರ್ಜನ್ಯ ಜಗಜ್ಜಾಹೀರಾಗಿದೆ.

ಇದಾದ ಬಳಿಕ ಹೇಮಾ ಸಮಿತಿ ವರದಿ ಬಗ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್​ನ ಖ್ಯಾತ ನಟಿ ಸಮಂತಾ ರುತ್​ ಪ್ರಭು ಕೂಡ ಈ ವರದಿಯನ್ನು ಬೆಂಬಲಿಸಿದ್ದಾರೆ. ಅಲ್ಲದೇ, ಟಾಲಿವುಡ್​ನಲ್ಲೂ ಇಂಥ ವರದಿ ಪ್ರಕಟ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಮಂತಾ ಅನೇಕ ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಸ್ಟಾರ್ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಮಲಯಾಳಂ ರೀತಿಯೇ ತೆಲುಗು ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆದ ಲೈಂಗಿಕ ಶೋಷಣೆ ಬೆಳಕಿಗೆ ಬರಬೇಕು ಎಂಬ ಒತ್ತಾಯ ಅನೇಕರಿಂದ ಕೇಳಿಬಂದಿದೆ. ಅದಕ್ಕೆ ಸಮಂತಾ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸಮಂತಾ ಅವರು ಇತ್ತೀಚೆಗೆ ಹೇಮಾ ಕಮಿಟಿ ವರದಿ ಬಗ್ಗೆ ಪೋಸ್ಟ್​ ಮಾಡಿದ್ದರು. ‘ತೆಲುಗು ಚಿತ್ರರಂಗದ ಮಹಿಳೆಯರು ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ. ಇದಕ್ಕೆ ಕಾರಣವಾದ ಮಲಯಾಳಂ ಚಿತ್ರರಂಗದ ಮಹಿಳೆಯರಿಗೆ ಮೆಚ್ಚುಗೆ ಸೂಚಿಸುತ್ತೇವೆ. ತೆಲುಗಿನಲ್ಲಿಯೂ ವಾಯ್ಸ್​ ಆಫ್​ ವಿಮೆನ್​ ತಂಡವನ್ನು 2019ರಲ್ಲಿ ಶುರುಮಾಡಲಾಗಿತ್ತು. ತೆಲಂಗಾಣ ಸರ್ಕಾರ ಕೂಡ ಹೇಮಾ ಸಮಿತಿ ರೀತಿಯ ವರದಿಯನ್ನು ಪ್ರಕಟಿಸಲಿ’ ಎಂದು ಈ ಪೋಸ್ಟ್​ನಲ್ಲಿ ಬರೆಯಲಾಗಿದೆ.

ಸಮಂತಾ ಮಾತ್ರವಲ್ಲದೇ ನಟಿ ಲಕ್ಷ್ಮಿ ಮಂಜು, ನಿರ್ದೇಶಕಿ ನಂದಿನಿ ರೆಡ್ಡಿ ಸೇರಿದಂತೆ ಹಲವರು ಇದೇ ಪೋಸ್ಟ್​ ಹಂಚಿಕೊಂಡಿದ್ದಾರೆ. ಸಮಂತಾ ಅವರು ಧ್ವನಿಗೂಡಿಸಿದ ಬಳಿಕ ಈ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿದೆ.

ಮಾಲಿವುಡ್​ನಲ್ಲಿ ಹಲವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಒಂದು ವೇಳೆ ತೆಲುಗು ಚಿತ್ರರಂಗದಲ್ಲೂ ಇದೇ ರೀತಿ ವರದಿ ಪ್ರಕಟವಾದರೆ ಹಲವು ನಟರು, ನಿರ್ದೇಶಕರು ಮತ್ತು ನಿರ್ಮಾಪಕರ ಬಣ್ಣ ಬಯಲಾಗುವ ಸಾಧ್ಯತೆ ದಟ್ಟವಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!