ಸಾಹಿತ್ಯ ಸಮ್ಮೇಳನ ಮನೆ ಮನೆ ಹಬ್ಬವಾಗಲಿ: ಶಾಸಕ ರಂಜನ್ ಕರೆ

ಹೊಸದಿಗಂತ ವರದಿ ಕುಶಾಲನಗರ :

ಕುಶಾಲನಗರದಲ್ಲಿ‌ ಫೆ.3 ರಂದು ಆಯೋಜಿಸಿರುವ ಪ್ರಥಮ‌ ಕನ್ನಡ ಸಾಹಿತ್ಯ ಸಮ್ಮೇಳನ‌ ಮನೆ ಮನೆಗಳ ಹಬ್ಬದ ಮಾದರಿಯಲ್ಲಿ ಆಚರಣೆಗೊಳ್ಳಬೇಕಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಅಪ್ಪಚ್ಚು ರಂಜನ್ ಕರೆ ನೀಡಿದರು.

ಕುಶಾಲನಗರದ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೊಸ ತಾಲೂಕಿನಲ್ಲಿ ನಡೆಯುತ್ತಿರುವ ಪ್ರಥಮ‌ ಸಾಹಿತ್ಯ ಸಮ್ಮೇಳನವನ್ನು ಶಿಸ್ತುಬದ್ಧವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಈಗಾಗಲೇ ರಚಸಿರುವ ಉಪ ಸಮಿತಿಗಳ ಪದಾಧಿಕಾರಿಗಳು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಕೋರಿದರು.

ತಾಲೂಕಿನಾದ್ಯಂತ ಇರುವ ಸಾಹಿತ್ಯಾಸಕ್ತರು, ಸಂಘ ಸಂಸ್ಥೆಗಳ ಪ್ರಮುಖರು ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅವರು ಕೈಗೊಳ್ಳಬೇಕಿರುವ ಸಮ್ಮೇಳನದ ಸಿದ್ಧತೆಗಳ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.

ಈ ಸಂದರ್ಭ ಕಸಾಪ ಜಿಲ್ಲಾ ನಿರ್ದೇಶಕರಾದ ಡೆನ್ನಿಸ್ ಡಿಸೋಜಾ, ಟಿ.ಜಿ.ಪ್ರೇಮಕುಮಾರ್, ಎಂ.ಇ.ಮೊಹಿದ್ದೀನ್, ಫ್ಯಾನ್ಸಿ ಮುತ್ತಣ್ಣ, ಕೆ.ಎನ್.ದೇವರಾಜು, ಮೆ.ನಾ.ವೆಂಕಟನಾಯಕ್, ತಾಲೂಕು ಕಸಾಪ ಕಾರ್ಯದರ್ಶಿ ಎಸ್.ನಾಗರಾಜು, ಕೋಶಾಧಿಕಾರಿ ಕೆ.ವಿ.ಉಮೇಶ್, ಮೆರವಣಿಗೆ ಸಮಿತಿ ಅಧ್ಯಕ್ಷ ವೆಂಕಟೇಶ ಪೂಜಾರಿ, ದ್ವಾರ ಸಮಿತಿಯ ನಾಗೇಗೌಡ, ವೇದಿಕೆ ನಿರ್ವಹಣೆ ಸಮಿತಿಯ ಅಧ್ಯಕ್ಷ ಪ್ರೇಮಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಉ.ರಾ.ನಾಗೇಶ್, ಗಾಯಕ ಬಿ.ಎಸ್.ಪರಮೇಶ್, ಕಸಾಪ ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ತಾಲೂಕು ಕಸಾಪ ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಟಿ.ಬಿ.ಮಂಜುನಾಥ್, ಭಾರತಿ, ಕಾಮಾಕ್ಷಿ, ಶೈಲಾ ಮೊದಲಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!