SHOCKING NEWS | ಕೇರಳಕ್ಕೆ ಲಗ್ಗೆ ಇಟ್ಟ ನೊರೋ ವೈರಸ್: ಇಬ್ಬರು ವಿದ್ಯಾರ್ಥಿಗಳಿಗೆ ಪಾಸಿಟಿವ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ 1 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳಿಗೆ ನೊರೊ ಸೋಂಕು ದೃಢಪಟ್ಟಿದೆ.

ಈ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಬ್ಬರು ವಿದ್ಯಾರ್ಥಿಗಳಿಗೆ ನೊರೋ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ.
ಸದ್ಯ ಮಕ್ಕಳ ಆರೋಗ್ಯದಲ್ಲಿ ಯಾವುದೇ ಆತಂಕವಿಲ್ಲ. ಸ್ಥಿರವಾಗಿದ್ದು, ಶಾಲೆಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಶಾಲೆಗಳಲ್ಲಿ ನೀರಿನ ಮೂಲಗಳನ್ನು ಕ್ಲೋರಿನೇಟ್ ಮಾಡಲಾಗುತ್ತಿದೆ ಮತ್ತು ತರಗತಿ ಕೊಠಡಿಗಳನ್ನು ಸೋಂಕು ರಹಿತಗೊಳಿಸಲಾಗುತ್ತಿದೆ.

ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಹಿತ 62 ಜನರಲ್ಲಿ ಅತಿಸಾರ, ಹೊಟ್ಟೆ ನೋವು, ವಾಂತಿ, ವಾಕರಿಕೆ, ಅಧಿಕ ತಾಪಮಾನ, ತಲೆನೋವು ಅಂತಹ ಲಕ್ಷಣ ಕಂಡ ಹಿನ್ನೆಲೆ ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದ್ದು, ಅದ್ರಲ್ಲಿ ಎರಡೂ ಧನಾತ್ಮಕ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ನೊರೊವೈರಸ್ ಒಂದು ಝೂನೋಟಿಕ್ ಕಾಯಿಲೆಯಾಗಿದ್ದು, ಇದು ಮುಖ್ಯವಾಗಿ ಸೋಂಕಿಗೆ ಒಳಗಾದ ಜನರೊಂದಿಗೆ ನಿಕಟ ಸಂಪರ್ಕದ ಮೂಲಕ ಅಥವಾ ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವ ಮೂಲಕ ಹರಡುತ್ತದೆ. ಇದು ಕಲುಷಿತ ನೀರಿನಿಂದ ಮತ್ತು ಸೋಂಕಿತ ವ್ಯಕ್ತಿಗಳ ನೇರ ಸಂಪರ್ಕದ ಮೂಲಕವೂ ಹರಡಬಹುದಾಗಿದೆ.

ಕಳೆದ ವರ್ಷ, ಕೇರಳವು ನೊರೊವೈರಸ್ ಪ್ರಕರಣಗಳನ್ನು ವರದಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!