ಜನ ಸೇವೆಯೇ ಮುಖ್ಯ ಗುರಿಯಾಗಿರಲಿ: ಸಚಿವ ನಿರಾಣಿ

ಹೊಸ ದಿಗಂತ ವರದಿ, ಕಲಬುರಗಿ:

ಜನರ ಕಷ್ಟಗಳನ್ನು ಅರಿತುಕೊಂಡು ಸೇವೆಗೆ ಮುಂದಾಗುವ ತವಕ ಪ್ರತಿಯೊಬ್ಬರಿಗೂ ಒಲಿಯುವುದಿಲ್ಲ.ಇಂತಹ ಸಂದರ್ಭದಲ್ಲಿ ಜನರ ಸೇವೆಯೇ ತನ್ನ ಗುರಿಯಾಗಿಸಿಕೊಂಡು ಅತ್ಯಂತ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿರುವ ಚಂದು ಪಾಟೀಲ್ ಅವರ ಕಾಯ೯ ಶ್ಲಾಘನೀಯವಾಗಿದೆ ಎಂದು ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಅವರು ನಗರದ ನಗರದ ನಂದೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಉತ್ತರ ಮಂಡಲ ಹಾಗೂ ಚಂದು ಪಾಟೀಲ್ ಫೌಂಡೇಶನ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆ ಆಲಿಸುವ ಕಾಳಜಿ.ಪ್ರತಿಯೊಬ್ಬ ನಾಯಕನಿಗೆ ಇರಲೆಬೇಕು. ಇಂತಹ ಕಾಳಜಿಯನ್ನು ಚಂದು ಪಾಟೀಲ್ ಸಮಾಜ ಮುಖಿಯಾದ ಕೆಲಸಗಳ ಮೂಲಕ ಮಾಡಿಕೊಂಡು ಮುನ್ನೆಡೆಯುತ್ತಿರುವುದು ಸಂತಸದ ಸುದ್ದಿಯಾಗಿದೆ. ಹೆಚ್ಚಿನ ಸಮಾಜ ಸೇವೆ,ಅವರ ಜನಪರವಾದ ಕಾಯ೯ಕ್ಕೆ ಇನ್ನಷ್ಟು ವೇಗ ಬರಬೇಕೆಂದರೆ.ಮುಂಬರುವ ದಿನಗಳಲ್ಲಿ ನಿಮ್ಮೇಲ್ಲರ ಆಶೀರ್ವಾದ ಅವರ ಮೇಲೆ ಇರಬೇಕೆಂದರು.
ಯುವ ಮಖಂಡ,ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ಮಾತನಾಡಿ, ಉತ್ತರ ಮತಕ್ಷೇತ್ರದ ವಾಡ೯ ನಂ-05 ಮತ್ತು 06ರಲ್ಲಿ ಉಚಿತ ಶಿಬಿರ ಆಯೋಜಿಸಲಾಗಿದ್ದು, ಸಚಿವರು ಸೇರಿದಂತೆ ಬಿಜೆಪಿ ನಾಯಕರು ಉದ್ವಾಟನೆ ಮಾಡಿದ್ದಾರೆ.ಹಲವು ವಷ೯ಗಳಿಂದ ನಿರಂತರವಾಗಿ ಚಂದು ಪಾಟೀಲ್ ಫೌಂಡೇಶನ್ ಆಶ್ರಯದಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಈ ಶಿಬಿರದಲ್ಲಿ 1000ಕ್ಕಿಂತ ಅಧಿಕ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಿ,ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಜನರಿಗೆ ಸೇವೆ ಸಲ್ಲಿಸುವುದೇ ನಮ್ಮೇಲ್ಲರ ಮುಖ್ಯ ಗುರಿಯಾಗಿದ್ದು, ಮುಂಬರುವ ದಿನಗಳಲ್ಲಿ ಕಲಬುರಗಿ ಉತ್ತರ ಮಂಡಲದ 10ರಿಂದ 12 ವಾಡ೯ಗಳಲ್ಲಿ ಈ ತರಹದ ಉಚಿತ ಶಿಬಿರಗಳನ್ನು ಆಯೋಜಿಸಿ,ಜನರಿಗೆ ನೆರವಾಗುವ ಕೆಲಸವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಡಾ.ಕೈಲಾಸ ಪಾಟೀಲ್ವ, ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಪಾಲಿಕೆ ‌ಸದಸ್ಯರಾದ ಗಂಗಮ್ಮ ಬಸವರಾಜ, ಅರುಣಾಬಾಯಿ ಲಿಂಗನವಾಡಿ, ಸುಭಾಷ್ ಚಂದ್ರ ಜಾಕಪಗೋಳ,ಅಂಬಾರಾಯ ಶೆಳ್ಳಗಿ, ಜಯಶ್ರೀ ಬೆಲಸೂರೆ,ಚನ್ನವೀರ ಲಿಂಗನವಾಡಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!