ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಮೊದಲಿನಿಂದಲೂ ಟ್ರೋಲ್‌ಗಳಿಗೆ ಒಳಗಾಗಿದ್ದಾರೆ, ಅವರನ್ನು ಪ್ರೀತಿಸುವವರು ಎಷ್ಟಿದ್ದಾರೋ ದ್ವೇಷಿಗಳು ಕೂಡ ಅಷ್ಟೇ ಇದ್ದಾರೆ. ಈ ಬಾರಿ ರಶ್ಮಿಕಾ ಟ್ರೋಲ್‌ಗಳಿಗೆ ಬೇಸತ್ತು ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದು, ಮೋಹಕ ತಾರೆ ರಮ್ಯಾ ಕೂಡ ರಶ್ಮಿಕಾಗೆ ಸಾಥ್ ಕೊಟ್ಟಿದ್ದಾರೆ.
ನನ್ನನ್ನು ಯಾಕೆ ದ್ವೇಷಿಸುತ್ತೀರಿ? ನಾನು ನಿಮಗೆ ಅಂಥದ್ದೇನು ಮಾಡಿದ್ದೇನು? ನನ್ನನ್ನು ನೀವು ಹೇಗೆ ಜಡ್ಜ್ ಮಾಡುತ್ತೀರಿ? ನಿಮಗೆ ಮನರಂಜನೆ ನೀಡಲು ನಾನು ಶ್ರಮಪಡುತ್ತೇನೆ, ಕೆಲಸದ ಬಗ್ಗೆಯೇ ಸದಾ ಯೋಚಿಸುತ್ತೇನೆ. ಎಲ್ಲರಿಗೂ ಹೆಮ್ಮೆ ಪಡುವ ಕೆಲಸ ಮಾಡಲು ಇಚ್ಛಿಸುತ್ತೇನೆ. ನಾನು ಹೇಳಿಯೇ ಇಲ್ಲದ ವಿಚಾರಕ್ಕೆ ನನ್ನನ್ನೇಕೆ ಟ್ರೋಲ್ ಮಾಡ್ತೀರಾ? ನಾನು ನೆಗೆಟಿವಿಟಿಗೆ ಪಂಚಿಂಗ್ ಬ್ಯಾಗ್ ಅಲ್ಲ ಎಂದು ರಶ್ಮಿಕಾ ಹೇಳಿಕೊಂಡಿದ್ದರು.
ಇದಕ್ಕೆ ತಾನ್ಯಾ ಹೋಪ್, ದುಲ್ಕರ್ ಸಲ್ಮಾನ್ ಹಾಗೂ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲಿಂಗ್ ಸರಿಯಲ್ಲ, ನಮ್ಮ ಅಭಿಪ್ರಾಯಗಳನ್ನು ಜನರ ಜೀವನದ ಮೇಲೆ ಹೇರಬಾರದು. ಅವರ ಜೀವನ ಹೇಗಿದೆ ಎನ್ನುವ ವಾಸ್ತವ ಅವರಿಗೆ ಮಾತ್ರ ಗೊತ್ತು. ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ ಎಂದು ರಮ್ಯಾ ಹೇಳಿದ್ದಾರೆ.