ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಪ್ರಕರಣ ಸಂಬಂಧ ಸಿಎಂ ವಿರುದ್ಧ ಯಾವುದೇ ತನಿಖೆ ನಡೆಯಲಿ ಕ್ಲೀನ್ ಆಗಿ ಹೊರಗೆ ಬರ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಸಿಎಂ ಮೇಲೆ ದೊಡ್ಡ ಷಡ್ಯಂತ್ರ ನಡೆದಿದೆ. ಯಾವುದೇ ತನಿಖೆ ನಡೆಯಲಿ ಕ್ಲೀನ್ ಆಗಿ ಹೊರಗೆ ಬರ್ತಾರೆ. ಏನು ಹಿನ್ನಡೆಯಾಗಿದೆ? ಆದೇಶ ಏನಿದೆ ನೋಡುತ್ತೇನೆ. ಸಿಎಂ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಆದರೆ ನಾವು ಸಿಎಂ ಪರ ಇದ್ದೇವೆ. ಅವರು ಯಾವುದೇ ತಪ್ಪು ಮಾಡಿಲ್ಲ ಎಂದರು.
ನನ್ನ ವಿರುದ್ಧವೂ ಹೀಗೆಯೇ ಷಡ್ಯಂತ್ರ ನಡೆದಿತ್ತು. ನನ್ನನ್ನು ಜೈಲಿಗೆ ಕಳುಹಿಸಿದ್ದರು. ಈಗ ಆ ಕೇಸ್ ಏನಾಗಿದೆ? ಹಾಗೆಯೇ ಸಿಎಂ ವಿರುದ್ಧವೂ ಷಡ್ಯಂತ್ರ ನಡೆದಿದೆ. ಏನೇ ಆಗಲಿ ಸಿಎಂ ಕ್ಲೀನ್ ಆಗಿ ಹೊರಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.