Monday, October 2, 2023

Latest Posts

ಲೋಕಸಭಾ ಚುನಾವಣೆಗೆ ಕಾರ್ಯಪೃವತ್ತರಾಗೋಣ: ಚಂದು ಪಾಟೀಲ್

ಹೊಸದಿಗಂತ ವರದಿ, ಕಲಬುರಗಿ:

ಭವಿಷ್ಯದಲ್ಲಿ ಉತ್ತರ ಮತಕ್ಷೇತ್ರದ ಪ್ರತಿಯೊಬ್ಬ ಕಾಯ೯ಕತ೯ನ ಜೊತೆಗೆ ನಾನಿರುತ್ತೇನೆ ಯಾವೊಬ್ಬ ಕಾಯ೯ಕತ೯ನು ಎದಗುಂದಬೇಕಾಗಿಲ್ಲ.ನಾವೆಲ್ಲರೂ ಸೇರಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷ ಸಂಘಟನೆಗೆ ಒತ್ತು ಕೊಡೋಣ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯಥಿ೯ಯಾಗಿದ್ದ,ಯುವ ಮುಖಂಡ ಚಂದು ಪಾಟೀಲ್ ಕರೆ ನೀಡಿದರು.

ನಗರದ ನೆಹರು ಗಂಜ್ ಪ್ರದೇಶದ ಎಸ್.ಬಿ.ಪಾಟೀಲ್ ಆಡಿಟೋರಿಯಮ್ ಹಾಲ್ನಲ್ಲಿ ಕರೆಯಲಾಗಿದ್ದ,ಆತ್ಮವಲೋಕನ ಸಭೆಯಲ್ಲಿ ಮಾತನಾಡಿದ ಅವರು,ಮುಂದಿನ ವಷ೯ದಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು,ನಾವೆಲ್ಲರೂ ಮತ್ತೊಮ್ಮೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವುದರೊಂದಿಗೆ,ಜಿಲ್ಲೆಯಲ್ಲಿ ಕಮಲವನ್ನು ವಿಜಯದ ಹಾದಿಗೆ ತರುವಲ್ಲಿ ಶ್ರಮಿಸೋಣ ಎಂದು ಹೇಳಿದರು.

ಬಿಜೆಪಿ ವಿಭಾಗದ ಸಂಘಟನಾ ಕಾರ್ಯದರ್ಶಿ ಅರುಣ ಬಿನ್ನಾಡಿ ಮಾತನಾಡಿ, ಇಡೀ ಉತ್ತರ ಮತಕ್ಷೇತ್ರದ ಕಾಯ೯ಕತ೯ರಿಗೆ ಈ ಸೋಲಿನಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಈ ಸೋಲಿನ ನೋವಿನಿಂದ ನಾವೆಲ್ಲರೂ ಹೊರ ಬರಬೇಕು.ಇಡೀ ರಾಜ್ಯದಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಒಳ್ಳೆಯ ಚಚೆ೯ಯಾಗಿತ್ತು.ಈ ಬಾರಿ ಉತ್ತರದಲ್ಲಿ ಕಮಲ ಬರಲಿದೆ ಎಂಬ ವಿಶ್ವಾಸ ನಮಗೆಲ್ಲರಿಗೂ ಇತ್ತು.ಆದರೆ ಕೆಲವು ಮತಗಳಿಂದ ನಮಗೆ ಸೋಲಾಗಿದೆ.ಹೀಗಾಗಿ ನಾವೆಲ್ಲರೂ ಈ ನೋವಿನಿಂದ ಹೊರ ಬಂದು ಪಕ್ಷದ ಸಂಘಟನೆ ದೃಷ್ಟಿಯಿಂದ ಮತ್ತೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಬುರಗಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಉತ್ತರ ಮಂಡಲದ ಅಧ್ಯಕ್ಷ ಅಶೋಕ್ ಮಾನಕರ್ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!