ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಮರದ ದಿಮ್ಮಿ ಹಾಕಿದ್ದ ಮುಂದಾದ ರೈತ ಮುಖಂಡನ ಪುತ್ರ ಹಾಗೂ ಸ್ನೇಹಿತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ರೈಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಹಾಕಿ ಹಳಿ ತಪ್ಪಿಸಲು ಯತ್ನಿಸಿದಾಗ ಲೋಕೋ ಪೈಲೆಟ್ ಸಮಯಕ್ಕೆ ಸರಿಯಾಗಿ ಬ್ರೇಕ್ ಹಾಕುವ ಮೂಲಕ ದುರಂತವನ್ನು ಸಂಭವಿಸುವುದನ್ನು ತಪ್ಪಿಸಿದ್ದಾರೆ.
ಇಪ್ಪತ್ತು ವರ್ಷದ ದೇವ್ ಸಿಂಗ್ ಹಾಗೂ ಫರೂಕಾಬಾದ್ ಅರಿಯಾರಾ ಗ್ರಾಮದ ಮೊಹನ್ ಕುಮಾರ್ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ದೇವ್ ಸಿಂಗ್‌ನ ತಂದೆ ಕಮಲೇಶ್ ರೈತ ಮುಖಂಡ.
ವಿಚಾರಣೆಯ ವೇಳೆ ತಮ್ಮ ಹೆಸರು ಹೆಚ್ಚು ಪ್ರಸಿದ್ಧಿ ಪಡೆಯುತ್ತದೆ ಎಂಬ ಕಾರಣಕ್ಕಾಗಿ ಹೀಗೆ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ ಎಂದು ಕಾಯಮ್ ಗಂಜ್ ಪೊಲೀಸ್ ಅಧಿಕಾರಿ ಹೇಳಿಕೆ ನೀಡಿದ್ದಾರೆ.