ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಸಂಸತ್ ಭವನದಲ್ಲಿ ಇಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಮಾತುಕತೆ
ನಡೆಸಿದರು.
ಈ ವೇಳೆ ಮೈಸೂರು ದಸರಾ (Mysuru Dasara) ಕಾರ್ಯಕ್ರಮದಲ್ಲಿ ವಿಶೇಷ ಏರ್ ಶೋ (Air Show) ನಡೆಸುವಂತೆ ಮನವಿ ಮಾಡಿದ್ದಾರೆ.
ಮೈಸೂರು ದಸರಾ ರಾಜ್ಯದ ಗತವೈಭವ ಮತ್ತು ಇತಿಹಾಸವನ್ನು ಸಾರುವ ಹಬ್ಬವಾಗಿದೆ.ಇದನ್ನು ನೋಡಲು ಲಕ್ಷಾಂತರ ಪ್ರವಾಸಿಗರು ರಾಜ್ಯಕ್ಕೆ ಆಗಮಿಸುತ್ತಾರೆ. ಈ ವರ್ಷವೂ ಅಕ್ಟೋಬರ್ 15-24 ರವರೆಗೂ ಅಚರಿಸಲು ನಿರ್ಧರಿಸಿದೆ. 2017 ಮತ್ತು 2019 ರಲ್ಲಿ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ವಾಯುಪಡೆ ವಿಶೇಷ ಏರ್ ಶೋ ನಡೆಸಿತ್ತು. ಬಹಳಷ್ಟು ಜನರು ಇದನ್ನು ನೋಡಿ ಇಷ್ಟಪಟ್ಟಿದ್ದರು. ಈ ವರ್ಷವೂ ವಾಯುಪಡೆಗಳಿಂದ ವಿಶೇಷ ಏರ್ ಶೋ ನಡೆಸಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ರಾಮನಾಥ್ ಸಿಂಗ್ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.