FOOD | ಏನಾದ್ರೂ ಸ್ವೀಟ್‌ ತಿನ್ನೋಣ ಅನಿಸ್ತಿದ್ಯಾ? ಮನೆಯಲ್ಲೇ ಮಾಡಿ ನೋಡಿ ಸಿಹಿಗೆಣಸಿನ ಹೋಳಿಗೆ

ಗೆಣಸು- ಅರ್ಧ ಕೆಜಿ
ತೊಗರಿಬೇಳೆ- 1 ಕೆಜಿ
ಬೆಲ್ಲ- 750 ಗ್ರಾಂ
ಮೈದಾ ಹಿಟ್ಟು- ಅರ್ಧ ಕೆಜಿ
ಎಣ್ಣೆ- ಸ್ವಲ್ಪ
ಅರಿಶಿಣ-ಸ್ವಲ್ಪ
ಏಲಕ್ಕಿ ಪುಡಿ-ಸ್ವಲ್ಪ

ಮೈದಾಹಿಟ್ಟಿಗೆ ಒಂದು ಸ್ಪೂನ್ ಅರಿಶಿಣ ಸೇರಿಸಿ, ಎಣ್ಣೆ ಹಾಕಿ ಕಣಕದ ಹದಕ್ಕೆ ಕಲಸಿಟ್ಟುಕೊಳ್ಳಿ.

ಗೆಣಸು ತೊಳೆದು ಬೇಯಿಸಿ, ಸಿಪ್ಪೆ ತೆಗೆದಿಟ್ಟುಕೊಳ್ಳಿ. ಬಳಿಕ ಬೇಳೆಯನ್ನು ಮೆದುವಾಗಿ ಬೇಯಿಸಿ, ನೀರು ತೆಗೆದು ಬೇಳೆಗೆ ಬೆಲ್ಲ ಹಾಕಿ ಸ್ವಲ್ಪ ಹೊತ್ತು ಕುದಿಸಿ.

ಬಳಿಕ ಬೆಂದ ಬೇಳೆ, ಗೆಣಸನ್ನು ಒಟ್ಟಿಗೆ ನುಣ್ಣಗೆ ಉಂಡೆ ಕಟ್ಟಲು ಬರುವಷ್ಟು ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಹೂರಣವನ್ನು ಲಿಂಬು ಗಾತ್ರ ಮಾಡಿಕೊಂಡು ಕಣಕದಲ್ಲಿ ತುಂಬಿ ಬಾಳೆ ಎಲೆಯ ಮೇಲಿಟ್ಟು ಎಣ್ಣೆ ಹಾಕಿ ನಿಧಾನಕ್ಕೆ ಲಟ್ಟಿಸಿ.

ನಂತರ ಒಲೆಯ ಮೇಲೆ ತವದ ಇಟ್ಟು ಚಿಕ್ಕ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿ. ಇದೀಗ ರುಚಿಕರವಾದ ಸಿಹಿ ಗೆಣಸಿನ ಹೋಳಿಗೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!