Sunday, October 1, 2023

Latest Posts

ನವೆಂಬರ್ ತಿಂಗಳಲ್ಲಿ ವರ್ಚುವಲ್ ಶೃಂಗಸಭೆ ನಡೆಸೋಣ: ವಿಶ್ವನಾಯಕರ ಮುಂದೆ ಪ್ರಧಾನಿ ಮೋದಿ ಪ್ರಸ್ತಾಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯಲ್ಲಿ 2 ದಿನದ ಜಿ20 ಶೃಂಗಸಭೆ ಅಂತ್ಯಗೊಂಡಿದೆ. ಈ ಬಾರಿಯ ಶೃಂಗಸಭೆಯ 73 ಘೋಷಣೆಗಳಿಗೆ ವಿಶ್ವನಾಯಕರಿಂದ ಅಂಗೀಕಾರ ಸಿಕ್ಕಿದೆ.

ಇದೀಗ ಈ ಘೋಷಣೆ, ಶಿಫಾರಸುಗಳ ಪ್ರಗತಿ ತಿಳಿಯಲು ನವೆಂಬರ್ ತಿಂಗಳಲ್ಲಿ ವರ್ಚುವಲ್ ಶೃಂಗಸಭೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮುಂದಿಟ್ಟಿದ್ದಾರೆ.

ಪ್ರಧಾನಿ ಮೋದಿ ಇಟ್ಟಿರುವ ಪ್ರಸ್ತಾಪಕ್ಕೆ ವಿಶ್ವನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಶೃಂಗಸಭೆಯ ಘೋಷಣೆ ಹಾಗೂ ಶಿಫಾರಸು ಪರಿಪೂರ್ಣವಾಗುವಂತೆ ನೋಡಿಕೊಳ್ಳಲು ವರ್ಚುವಲ್ ಸಭೆ ಅವಶ್ಯಕ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

ಭಾರತದ ಅಧ್ಯಕ್ಷತೆ ವಹಿಸಿದ ಜಿ20 ಶೃಂಗಸಭೆ ನವೆಂಬರ್ ತಿಂಗಳವರೆಗೆ ಇರಲಿದೆ. ಹೀಗಾಗಿ ನವೆಂಬರ್ ತಿಂಗಳಲ್ಲಿ ವರ್ಚುವಲ್ ಸಭೆ ನಡೆಸಿ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡು ನಿರ್ಣಯಗಳು, ಘೋಷಣೆಗಳ ಪ್ರಗತಿ ಪರಿಶೀಲನೆ ನಡೆಸಲ ಉದ್ದೇಶಿಸಿದ್ದಾರೆ. ಈ ಮೂಲಕ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆ ಅರ್ಥಪೂರ್ಣವಾಗುವಂತೆ ಮಾಡಲು ಮೋದಿ ನಿರ್ಧರಿಸಿದ್ದಾರೆ.

ಕಳೆದ 1 ವರ್ಷದ ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ದೇಶಾದ್ಯಂತ ಸುಮಾರು 220ಕ್ಕೂ ಸಭೆಗಳನ್ನು ಭಾರತ ನಡೆಸಿದೆ. ಜಿ20 ಒಕ್ಕೂಟದಲ್ಲಿ ಭಾರತದ ಅಧ್ಯಕ್ಷತೆ ನ.30ಕ್ಕೆ ಮುಕ್ತಾಯವಾಗಲಿದೆ.

ಇಂದು ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಂದಿನ ವರ್ಷದ ಜಿ20 ಶೃಂಗಸಭೆ ಅಧ್ಯಕ್ಷತೆಯನ್ನು ಬ್ರೆಜಿಲ್‌ಗೆ ಹಸ್ತಾಂತರಿಸಿದ್ದಾರೆ. ಈ ವರ್ಷದ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮುಂದಿನ 1 ವರ್ಷಗಳ ಕಾಲ ಭಾರತ ಸಹ ಬ್ರೆಜಿಲ್‌ ಜೊತೆ ಕೆಲಸ ಮಾಡಲಿದೆ. 2024ರಲ್ಲಿ ರಿಯೋ ಡಿ ಜನೈರೋದಲ್ಲಿ ನಡೆಯುವ ಶೃಂಗಸಭೆಯವರೆಗೆ ಭಾರತ, ಬ್ರೆಜಿಲ್‌ ಹಾಗೂ ದಕ್ಷಿಣ ಆಫ್ರಿಕಾಗಳು ಪ್ರಮುಖ 3 ರಾಷ್ಟ್ರಗಳಾಗಿ ಕಾರ್ಯ ನಿರ್ವಹಿಸಲಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!