ಮನೆಯ ಹೆಣ್ಣು ಮಕ್ಕಳಿಗೆ ಕ್ಷಾತ್ರ ಪರಂಪರೆಯ ಅರಿವು ಮೂಡಿಸೋಣ: ಅಕ್ಷಯಾ ಗೋಖಲೆ

ಹೊಸದಿಗಂತ ವರದಿ, ಕಲಬುರಗಿ:

ಸನಾತನ ಧರ್ಮದ ಸಂಸ್ಕೃತಿ, ಕ್ಷಾತ್ರ ಪರಂಪರೆಯನ್ನು ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅರಿವು ಮಾಡಿಸುವುದು ಅತ್ಯಂತ ಅವಶ್ಯಕತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕಾಕ೯ಳ್,ನ ಕುಮಾರಿ ಅಕ್ಷಯಾ ಗೋಖಲೆ ಅಭಿಮತ ವ್ಯಕ್ತಪಡಿಸಿದರು.

ಭಾನುವಾರ ವಿಶ್ವ ಹಿಂದೂ ಪರಿಷತ್,
ಮಾತೃಶಕ್ತಿ-ದುಗಾ೯ವಾಹಿನಿ ಕಲಬುರಗಿ ಮಹಾ ನಗರ ಜಿಲ್ಲಾ ದುಗಾ೯ಷ್ಟಮಿ ನಿಮಿತ್ತ ದುಗಾ೯ ಸಮಾವೇಶದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಬೌದ್ಧಿಕ ನೀಡಿದರು.

ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕ ವಾಗಿ ಭಾರತವನ್ನು ಮೊಘಲರು ತುಂಡು ಮಾಡಿದರು.ಆದರೆ ಮೊಘಲರ ವಿರುದ್ಧ ತೊಡೆ ತಟ್ಟುವ ಮೂಲಕ ಇಡೀ ಮೊಘಲ ಸಾಮ್ರಾಜ್ಯವನ್ನೆ ಕಿತ್ತು ಹಾಕಿದ ವೀರ ಛತ್ರಪತಿ ಶಿವಾಜಿ ಮಹಾರಾಜರ ನಾವು ಯಾವತ್ತೂ ಮರೆಯುವಂತಿಲ್ಲ. ಅಧಮ೯ ತಾಂಡವಾಡುತ್ತಿರುವ ಸಂದರ್ಭದಲ್ಲಿ ಧಮ೯ವನ್ನು ಉಳಿಸುವ ಕಾಯ೯ ನಮಿಂದ ಮಾತ್ರ ಸಾಧ್ಯವಿದೆ ಎಂದರು.

ಭಾರತದ ಕ್ಷಾತ್ರ ಪರಂಪರೆಯ ಬಗ್ಗೆ ಇಡೀ ವಿಶ್ವದಲ್ಲೇ ಪಸರಿಸಿದ ಸ್ವಾಮಿ ವಿವೇಕಾನಂದರನ್ನು ನಾವೆಲ್ಲರೂ ಆದಶ೯ವಾಗಿ ಇಟ್ಟುಕೊಳ್ಳಬೇಕಾಗಿದೆ. ದುಗೇ೯ಯ ರೂಪದಲ್ಲಿ ಸಹಸ್ರಾರು ದುಗೇ೯ಯರ ಇಂದಿನ ರೂಪ ನಮ್ಮ ದಿನನಿತ್ಯದ ಜೀವನದಲ್ಲಿ ಉಳಿಸಬೇಕೊಳ್ಳಬೇಕಾಗಿದೆ ಎಂದರು.

ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕಾದರೇ ದುಗೇ೯ಯ ರೂಪವನ್ನು ನಮ್ಮ ಮನೆಯ ಹೆಣ್ಣು ಮಕ್ಕಳು ಅವತರಿಸಬೇಕಾದ ಅನಿವಾರ್ಯತೆ ಇದೆ. ತಾಯಿ ಭಾರತ ಮಾತೇಯನ್ನು ದಾಸ್ಯದಿಂದ ಮುಕ್ತಗೊಳಿಸಿ,ವಿಶ್ವಗುರು ಮಾಡುವ ಸಂಕಲ್ಪ ನಮ್ಮದಾಗಿರಬೇಕು ಎಂದರು.

ಇದಕ್ಕೂ ಮುನ್ನ ನಗರದ ನಗರೇಶ್ವರ ಶಾಲೆಯ ಆವರಣದಿಂದ ನಗರದ ಜಗತ್ ವೃತ್ತದವರೆಗೆ ಸಹಸ್ರಾರು ಮಾತೇಯರಿಂದ ದುಗಾ೯ ದೌಡ ನಡೆಯಿತು. ಸುಮಾರು 2000 ಸಾವಿರ ಮಾತೇಯರು ಭಾವಹಿಸಿದ್ದರು.

ಕಾಯ೯ಕ್ರಮದ ಅಧ್ಯಕ್ಷತೆ ಸುನೀತಾ ಶಿಂಧೆ,ಮುಖ್ಯ ವಕ್ತಾರರು ಅಕ್ಷಯಾ ಗೋಖಲೆ,ಕಾಕ೯ಳ್,ಸಂಗೀತಾ ಗಿಲ್ಡಾ,ಶಾರದಾ ಯಾಕಾಪುರ,ಸುಮಂಗಲಾ ಬಟ್ಟರಕಿ,ಸುಮಾ ಗಿರೀಶ್ ಕಲಬುರಗಿ,ಉಶಾ,ಜ್ಯೋತಿ ರಾಜು ಗುತ್ತೇದಾರ,ಅನಿತಾ ಕಲಬುರಗಿ, ಶೀವಲೀಲಾ ಸೂಯ೯ಕಾಂತ,ಜಾನವಿ ಮೋದಿ,ಇಂದಿರಾ ಬಾಯಿ ಗೋಡೆ,ಸುಧಾ ಕರಲಗಿಕರ್,ಮಂಜುಳಾ ಗುಪ್ತಾ,ಮಹಾದೇವಿ ಐನಾಪುರ,ಶಿವರಾಜ್ ಸಂಗೋಳಗಿ,ರಾಜು ನವಲದಿ,ಅಶ್ವಿನಕುಮಾರ, ಪ್ರಶಾಂತ್ ಗುಡ್ಡಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!