ಹೊಸದಿಗಂತ ಡಿಜಿಟಲ್ ಡೆಸ್ಕ್:
1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಸಿಡಬ್ಲೂಸಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕೆ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ.
ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಡಬ್ಲ್ಯುಸಿ ಸದಸ್ಯರಿಗೆ ಅವರು ಪತ್ರ ಬರೆದಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮೆಲ್ಲರೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸುತ್ತೇನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 39 ನೇ ಅಧಿವೇಶನವು ನಿಖರವಾಗಿ ನೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ನಡೆದಿತ್ತು, ಆದ್ದರಿಂದ ನೀವು ಬೆಳಗಾವಿ ನಗರದಲ್ಲಿ ಸಮಾವೇಶಗೊಂಡಿರುವುದು ಮಾತ್ರ ಸೂಕ್ತವಾಗಿದೆ.
ಗಾಂಧೀಜಿ ಇದೇ ಸ್ಥಳದಲ್ಲಿ ಅಧ್ಯಕ್ಷರಾಗಿರುವುದಕ್ಕೆ ನಮ್ಮ ಪಕ್ಷಕ್ಕೆ ಹಾಗೂ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ತಿರುವು ನೀಡಿದೆ. ಇದು ನಮ್ಮ ದೇಶದ ಇತಿಹಾಸದಲ್ಲಿ ಪರಿವರ್ತನೆಯ ಮೈಲಿಗಲ್ಲು.ದೆಹಲಿಯಲ್ಲಿ ಅಧಿಕಾರದಲ್ಲಿ ಇರುವವರಿಂದ ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಬೆದರಿಕೆ ಇದೆ. ಅಧಿಕಾರದಲ್ಲಿರುವ ಸಂಘಟನೆಗಳು ಎಂದೂ ಸ್ವಾತಂತ್ರ್ಯಕ್ಕಾಗಿ ಎಂದೂ ಹೋರಾಟ ಮಾಡಲಿಲ್ಲ. ಅಲ್ಲದೇ ಮಹಾತ್ಮ ಗಾಂಧೀಜಿ ಅವರನ್ನ ಕಟುವಾಗಿ ವಿರೋಧಿಸಿದವರು, ಗಾಂಧೀಜಿ ಹತ್ಯೆ ಮಾಡಿದವರನ್ನ ಸಂಭ್ರಮಿಸಿದವರು.
ದೇಶದ ವಿವಿಧೆಡೆ ಗಾಂಧಿ ಸಂಘ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿದ್ದು, ಇಂದು ನಡೆಯುತ್ತಿರುವ ಸಭೆಯನ್ನ ನವ ಸತ್ಯಾಗ್ರಹ ಬೈಠಕ್ ಎಂದು ಕರೆದಿರುವುದು ಸೂಕ್ತವಾಗಿದೆ. ಅಂತಹ ಶಕ್ತಿಗಳ ವಿರುದ್ಧ ರಾಜಿಯಾಗದೇ ಹೋರಾಟ ನಡೆಸುವ ನಿರ್ಣಯ ಮಾಡುವುದು ಸಂಕಲ್ಪ ಮತ್ತು ಕರ್ತವ್ಯ. ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡೋಣ ಎಂದು ಕರೆ ನೀಡಿದ್ದಾರೆ. ಅಂತಹ ಶಕ್ತಿಗಳ ವಿರುದ್ಧ ರಾಜಿಯಾಗದೇ ಹೋರಾಟ ನಡೆಸುವ ನಿರ್ಣಯ ಮಾಡುವುದು ಸಂಕಲ್ಪ ಮತ್ತು ಕರ್ತವ್ಯ. ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡೋಣ ಎಂದು ಪತ್ರದ ಮೂಲಕ ಕರೆ ಕೊಟ್ಟಿದ್ದಾರೆ.