ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಸರ್ಕಾರಕ್ಕೆ ಗ್ಯಾರೆಂಟಿ ಯೋಜನೆಗಳು ದೊಡ್ಡ ಹೊರೆಯೇನಲ್ಲ. ಆದರೆ ಗ್ಯಾರೆಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು. ಸತ್ಯ ಹೇಳಿಯೇ ರಾಜಕೀಯ ಮಾಡೋಣ, ಸುಳ್ಳುಗಳ ಬೇಡ ಎಂದು ಸಿಎಂ ಸಿದ್ದರಾಮಯ್ಯ ಸ್ವಪಕ್ಷ ನಾಯಕರಿಗೆ ಸೂಚನೆ ನೀಡಿದ್ದಾರೆ.
ಹಣವಿಲ್ಲದೆ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡೋದಕ್ಕೆ ಸಾಧ್ಯವಾ? ಗ್ಯಾರೆಂಟಿ ಯೋಜನೆಗಳ ಬಗ್ಗೆ ನೀವೇ ಅಪಪ್ರಚಾರ ಮಾಡುತ್ತಿದ್ದೀರಿ, ಮೊದಲು ಇದನ್ನು ನಿಲ್ಲಿಸಿ. ಗ್ಯಾರೆಂಟಿಗಳನ್ನು ಅಪಹಾಸ್ಯ ಮಾಡಿದವರೇ ಈಗ ಮೋದಿ ಗ್ಯಾರೆಂಟಿ ಶುರು ಮಾಡಿದ್ದಾರೆ.
ಭಾರತದ ಇತಿಹಾಸದಲ್ಲಿ ಗ್ಯಾರೆಂಟಿ ಯಾರೂ ಮಾಡಿಲ್ಲ. ಇದನ್ನು ಜಾರಿಮಾಡಿದವರು ನಾವೇ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಗ್ಯಾರೆಂಟಿಗಳಿಂದಾಗಿ ಜನ ಊಟಕ್ಕೆ, ದನಗಳ ಮೇವಿಗೆ, ಉದ್ಯೋಗ ಖಾತ್ರಿಗೆ ತೊಂದರೆ ಇಲ್ಲದಂತೆ ಇದ್ದಾರೆ ಎಂದಿದ್ದಾರೆ.