LG ಮೆಡಿಕಲ್ ಕಾಲೇಜು ಇನ್ಮುಂದೆ ಪ್ರಧಾನಿ ನರೇಂದ್ರ ಮೋದಿ ಕಾಲೇಜು: ಮರುನಾಮಕರಣಕ್ಕೆ ಕಾರಣವೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಹಮ್ಮದಾಬಾದ್‌ ನ ಮಣಿನಗರದಲ್ಲಿರುವ ಪ್ರತಿಷ್ಠಿತ LG ಮೆಡಿಕಲ್ ಕಾಲೇಜು ಹೆಸರನ್ನು ಮರುನಾಮಕರಣ ಮಾಡಲು ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಮುಂದಾಗಿದೆ.

ಈ ಕುರಿತು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹಾಗೂ ಮುನ್ಸಿಪಲ್ ಕಾರ್ಪೋರೇಶನ್ ಮಹತ್ವದ ಸಭೆ ನಡೆಸಿದೆ. ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನಲೆಯಲ್ಲಿ LG ಮೆಡಿಕಲ್ ಕಾಲೇಜು ಇನ್ಮುಂದೆ ಪ್ರಧಾನಿ ನರೇಂದ್ರ ಮೋದಿ ಕಾಲೇಜು ಎಂದು ಬದಲಾಗಲಿದೆ.

ಮೋದಿ ಹೆಸರಿಡಲು ಕಾರಣವೇನು?

ಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿ ಭಾರಿ ಸಂಚಲನ ಸೃಷ್ಟಿಸಿದ್ದರು. ಅಹಮ್ಮದಾಬಾದ್‌ನ ಮಣಿನಗರ ಕ್ಷೇತ್ರದಿಂದ 11 ಬಾರಿ ಆಯ್ಕೆಯಾಗಿರುವ ಮೋದಿಗೆ ಗೌರವ ಸೂಚಿಸುವ ಈ ನಿರ್ಧಾರ ಕೈಗೊಂಡಿರುವುದಾಗಿ ಅಹಮ್ಮದಾಬಾದ್ ಮುನ್ಸಿಪಾಲ್ ಕಾರ್ಪೋರೇಶನ್ ಹೇಳಿದೆ. ಸತತ 11 ವರ್ಷ ಅಹಮ್ಮದಾಬಾದ್ ಮಣಿನಗರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಪ್ರಧಾನಿಯಾದ ಬಳಿಕವೂ ಗುಜರಾತ್ ಹಾಗೂ ಇಡೀ ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಹೀಗಾಗಿ ಮಣಿನಗರದ ಕಾಲೇಜಿಗೆ ಮೋದಿ ಹೆಸರಿಡಲು ನಿರ್ಧರಿಸಲಾಗಿದೆ ಎಂದು ಅಹಮ್ಮದಾಬಾದ್ ಕಾರ್ಪೋರೇಶನ್ ಸ್ಪಷ್ಟಪಡಿಸಿದೆ.

ಮಣಿನಗರ ಕ್ಷೇತ್ರದ ಶಾಸಕರಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಡಿಸೆಂಬರ್ 2002ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಮೊದಲ ಬಾರಿಗೆ ಮಣಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. 2003ರಲ್ಲಿ ಮಣಿನಗರದಲ್ಲಿ ಮೋದಿ ಕಚೇರಿ ಆರಂಭಿಸಿದ್ದರು. ಬಳಿಕ ಈ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸಿದ್ದರು. ಇಷ್ಟೇ ಅಲ್ಲ ಈ ಕಚೇರಿಗೆ ಕ್ಷೇತ್ರದ ಜನರೂ ಯಾವುದೇ ಸಮಯದಲ್ಲಿ ಬಂದು ದೂರು, ಮನವಿಗಳನ್ನು ನೀಡಲು ಅವಕಾಶ ಮಾಡಿಕೊಟ್ಟಿದ್ದರು.

ಅಲ್ಲದೆ ಹಳ್ಳ ಹಿಡಿದಿದ್ದ LG ಮೆಡಿಕಲ್ ಕಾಲೇಜಿಗೆ ಹೊಸ ಘನತೆ ಬಂದಿತ್ತು. LG ಮೆಡಿಕಲ್ ಕಾಲೇಜಿನ ಸಂಪೂರ್ಣ ಚಿತ್ರಣ ಬದಲಿಸಿದರು. ಹೊಸ ಮೆಡಿಕಲ್ ಕಾಲೇಜು ಕಟ್ಟಡ ಆರಂಭಿಸಲಾಗಿತ್ತು. ದಂತ್ಯವೈದ್ಯ ಕಾಲೇಜು ಸೇರಿಸಲಾಗಿತ್ತು. ಮೋದಿ ಶ್ರಮದಿಂದ LG ಮೆಡಿಕಲ್ ಕಾಲೇಜು ಗಜುರಾತ್‌ನಲ್ಲಿ ಪ್ರತಿಷ್ಠಿತ ಕಾಲೇಜಾಗಿ ಹೊರಹೊಮ್ಮಿತು. ಮಣಿನಗರಕ್ಕೆ ಗುಜರಾತ್‌ನಲ್ಲಿ ಪ್ರಮುಖ ಸ್ಥಾನಮಾನ ಸಿಕ್ಕಿದ್ದು ನರೇಂದ್ರ ಮೋದಿಯಿಂದ. ಹೀಗಾಗಿ ಇಡೀ ಕ್ಷೇತ್ರದ ಜನರು ಮೋದಿ ಹೆಸರನ್ನು ಕಾಲೇಜಿಗೆ ಇಡಬೇಕು ಎಂದು ಮನವಿ ಸಲ್ಲಿಸಿದ್ದರು. ಕಳೆದ ಹಲವು ವರ್ಷಗಳಿಂದ ಈ ಮನವಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಇತ್ತೀಚೀಗೆ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿ ಎಲ್ಲರ ಅಭಿಪ್ರಾಯ ಪಡೆದು ಮರುನಾಮಕರಣಕ್ಕೆ ನಿರ್ಧರಿಸಲಾಗಿದೆ ಎಂದು ಅಹಮ್ಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!