ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದ ಗಾಲೆಯಲ್ಲಿ ನಡೆದ Li Ning ಶ್ರೀಲಂಕಾ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕರ್ನಾಟಕದ ರಾಹುಲ್ ಭಾರದ್ವಾಜ್ ರನ್ನರ್ ಅಪ್ ಸ್ಥಾನ ಗಳಿಸಿದ್ದಾರೆ.
ಸಿಂಗಲ್ಸ್ನ ಫೈನಲ್ನಲ್ಲಿ ಕೆನಡಾ ಆಟಗಾರ ಕ್ಸಿಯೊಡಾಂಗ್ ಶೆಂಗ್ಗೆ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ಕರ್ನಾಟಕದ ಕುದುರೆಮುಖದವರಾದ 23 ವರ್ಷದ ರಾಹುಲ್ ಹೈದರಾಬಾದ್ನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಈ ಮೊದಲು ಗಣೇಶ್ ಕುಡ್ವಾ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದರು .ಬಳಿಕ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದರು .