February 3, 2026
Tuesday, February 3, 2026
spot_img

LIFE | Boundary ಹಾಕಿಕೊಳ್ಳೋದು ಸ್ವಾರ್ಥನಾ? self-care?

Boundary ಹಾಕಿಕೊಳ್ಳೋದು ಸ್ವಾರ್ಥ ಅಂತಾ ಬಹಳ ಜನ ಭಾವಿಸ್ತಾರೆ. ಯಾಕಂದ್ರೆ ನಾವು ಬೆಳೆದ ರೀತಿ ಅಂಥದ್ದು. ತ್ಯಾಗ, ಸಹನೆ, ಅಡ್ಜಸ್ಟ್‌ಮೆಂಟ್‌ ಇವೇ ಒಳ್ಳೆಯ ಗುಣಗಳು ಅಂತ ಕಲಿಸಿದ್ದಾರೆ. ಆದ್ರೇ ಯಾರಿಗೂ ನೋವು ಕೊಡಬಾರದು ಅನ್ನೋ ಪ್ರಯತ್ನದಲ್ಲಿ, ನಾವು ನಮ್ಮನ್ನೇ ದಿನೇ ದಿನೇ ಮರೆತು ಹೋಗ್ತೀವಿ ಅನ್ನೋದು ಮಾತ್ರ ಯಾರೂ ಹೇಳಿಲ್ಲ.

Boundary ಅಂದ್ರೆ ಗೋಡೆ ಕಟ್ಟೋದು ಅಲ್ಲ. ಎಲ್ಲರನ್ನೂ ದೂರ ತಳ್ಳೋದು ಅಲ್ಲ. ಅದು ನಮ್ಮೊಳಗಿನ ಒಂದು ಸ್ಪಷ್ಟತೆ. “ಇಷ್ಟು ತನಕ ಓಕೆ, ಇದರ ನಂತರ ಅಗಲ್ಲ” ಅನ್ನೋ ಅರಿವು. ಕೆಲವರಿಗೆ ಅದು ಸಮಯದ boundary ಆಗಿರಬಹುದು, ಕೆಲವರಿಗೆ ಮಾತಿನ, ಕೆಲವರಿಗೆ ಭಾವನೆಯ. ಪ್ರತಿಯೊಂದು boundary ಹಿಂದೆ ಒಂದು ಕಾರಣ ಇರುತ್ತೆ ಅದೇ ನಮ್ಮ ಶಾಂತಿ.

ಸ್ವಾರ್ಥ ಅಂದ್ರೆ, “ನನಗೆ ಮಾತ್ರ ಬೇಕು, ಇತರರು ಏನು ಬೇಕಾದ್ರೂ ಪರವಾಗಿಲ್ಲ” ಅನ್ನೋ ಮನಸ್ಥಿತಿ. Self-care ಅಂದ್ರೆ, “ನಾನೂ ಒಂದು ಮಾನವ, ನನಗೂ ಮಿತಿಗಳಿವೆ” ಅನ್ನೋ ಒಪ್ಪಿಗೆ. ಈ ಎರಡರ ನಡುವೆ ಭಾರೀ ವ್ಯತ್ಯಾಸ ಇದೆ. Boundary ಇಟ್ಟ್ಕೊಳ್ಳೋದು ಅಂದ್ರೆ ಇತರರನ್ನು ಶಿಕ್ಷಿಸೋದು ಅಲ್ಲ, ನಮ್ಮನ್ನೇ ಕಾಪಾಡಿಕೊಳ್ಳೋದು.

ಇದನ್ನೂ ಓದಿ:

ಆಶ್ಚರ್ಯ ಏನಂದ್ರೆ, boundary ಇಲ್ಲದವ್ರನ್ನೇ ಜನ ಹೆಚ್ಚು ಬಳಸಿಕೊಳ್ಳುತ್ತಾರೆ. Boundary ಇಟ್ಟವರು ಮೊದಲಿಗೆ ಸ್ವಲ್ಪ ಕಠಿಣ ಅನ್ನಿಸಬಹುದು. ಆದ್ರೇ ಸಮಯ ಹೋದ್ಮೇಲೆ ಅವರ ಮೌಲ್ಯ ಅರ್ಥ ಆಗುತ್ತೆ. ಯಾಕಂದ್ರೆ ಅವರು ‘ಹೌದು’ ಅನ್ನೋ ಮಾತಿಗೆ ತೂಕ ಕೊಡ್ತಾರೆ, ‘ಇಲ್ಲ’ ಅನ್ನೋದನ್ನೂ ಗೌರವಿಸ್ತಾರೆ.

Self-care ಅಂದ್ರೆ ಸ್ಪಾ, ರಜೆ, ಫ್ಯಾನ್ಸಿ ಪದಗಳಲ್ಲ. ಕೆಲವೊಮ್ಮೆ ಅದು ಒಂದು ಸರಳ “ಇದು ನನಗೆ ಸಾಧ್ಯವಿಲ್ಲ” ಅನ್ನೋ ವಾಕ್ಯ. Boundary ಇಟ್ಟ್ಕೊಳ್ಳೋದರಿಂದ ನೀವು ಕೆಟ್ಟವರಾಗಲ್ಲ. ನೀವು ಸ್ಪಷ್ಟವಾಗ್ತೀರ. ಮತ್ತು ಸ್ಪಷ್ಟತೆ ಎಂದಿಗೂ ಸ್ವಾರ್ಥ ಅಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !