ದಿನಭವಿಷ್ಯ: ಇಂದು ಹೆಚ್ಚು ಉತ್ಸಾಹ, ಹೆಚ್ಚು ಕೆಲಸ ಹಾಗೇ ಹೆಚ್ಚು ಯಶಸ್ಸು

ಮೇಷ
ಪ್ರೀತಿಪಾತ್ರರನ್ನು ಮೆಚ್ಚಿಸಲು ಹೆಚ್ಚು ಆದ್ಯತೆ ಕೊಡುವಿರಿ. ಉದ್ಯಮಿಗಳಿಗೆ ವಿರೋಧಿಗಳಿಂದ ಕಿರುಕುಳ ಸಂಭವ. ಆರ್ಥಿಕ ಹಿಂಜರಿತ.

ವೃಷಭ
ನಿಮ್ಮ ಖರ್ಚು ಕಡಿಮೆಗೊಳಿಸಿ ಉಳಿತಾಯ ಹೆಚ್ಚಿಸಲು ಆದ್ಯತೆ ಕೊಡುವಿರಿ. ಆಮಿಷಗಳಿಗೆ ಬಲಿಯಾಗಬೇಡಿ. ಸಾಲ ನೀಡಬೇಡಿ.

ಮಿಥುನ
ದೈನಂದಿನ ವ್ಯವಹಾರ ಹೊರತುಪಡಿಸಿ ಬೇರೆ ವಿಚಾರದತ್ತ ಹೆಚ್ಚು ಗಮನ ಕೊಡಬೇಕಾಗುವುದು. ಇದರಿಂದ ಮುಖ್ಯ ಕೆಲಸಗಳು ಬಾಕಿ.

ಕಟಕ
ಹೆಚ್ಚು ವಿಶೇಷಗಳಿಲ್ಲದ ದಿನ. ಕೆಲಸದಲ್ಲಿ ಆತುರ ತೋರಬೇಡಿ. ಸಾವಧಾನವಾಗಿ ಮಾಡಿದರೇ ಒಳಿತು. ಇಲ್ಲವಾದರೆ ತಪ್ಪೆಸಗುವಿರಿ.

ಸಿಂಹ
ಇಂದು ತೆಗೆದುಕೊಳ್ಳುವ ಪ್ರಮುಖ ನಿರ್ಧಾರ ದೀರ್ಘಾವಧಿ ಪರಿಣಾಮ ಬೀರುವುದು. ಆದ್ದರಿಂದ ಯೋಚಿಸಿ ಮುಂದಡಿ ಇಡಿರಿ.

ಕನ್ಯಾ
ನಿಮ್ಮ ಸ್ಥಿತಿ ತುಸು ಡೋಲಾಯಮಾನ ವಾಗಿದೆ. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆಯಿಡಿ. ವಿಶ್ವಾಸ ಕುಂದಿಸುವ ಬೆಳವಣಿಗೆ ಸಂಭವ.

ತುಲಾ
ನಿಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಲು ತಯಾರಾಗಿ. ಕೌಟುಂಬಿಕ ಭಿನ್ನಮತವನ್ನು ಸಹನೆ ಯಿಂದ ನಿಭಾಯಿಸಿ.

ವೃಶ್ಚಿಕ
ಧಾರ್ಮಿಕ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗುವಿರಿ. ಹಾಗೆಂದು ದೈನಂದಿನ ಕಾರ್ಯ ಕಡೆಗಣಿಸಬೇಡಿ. ಅದಕ್ಕೆ ಆದ್ಯತೆಯಿರಲಿ. ಖರ್ಚು ಹೆಚ್ಚಳ.

ಧನು
ಹೆಚ್ಚು ಉತ್ಸಾಹ, ಹೆಚ್ಚು ಕಾರ್ಯ. ಅದರಲ್ಲಿ ಯಶಸ್ಸು. ಹಾಗಾಗಿ ತೃಪ್ತಿಕರವಾಗಿ ದಿನ ಸಾಗುವುದು. ಪ್ರೀತಿಯ ವಿಷಯದಲ್ಲೂ ನಿಮ್ಮ ಕೋರಿಕೆ ಈಡೇರುವುದು.

ಮಕರ
ಅನಿರೀಕ್ಷಿತ ಘಟನೆಗೆ ಸಾಕ್ಷಿಯಾಗುವಿರಿ. ಅದು ನಿಮ್ಮನ್ನು ಅಚ್ಚರಿಗೆ ತಳ್ಳುವುದು. ಕಾಲಮಿತಿಯಲ್ಲಿ ಕೆಲಸ ಮುಗಿಸಲು ಕಷ್ಟ ಪಡುವಿರಿ.

ಕುಂಭ
ಇತರರನ್ನು ಹತ್ತಿಕ್ಕಿ ನಿಮ್ಮ ಗುರಿ ಸಾಧಿಸಲು ಯತ್ನಿಸುವಿರಿ. ಮಹತ್ವದ ಬೆಳವಣಿಗೆ ಸಾಧಿಸುವ ಉದ್ದೇಶ ನಿಮ್ಮದು. ಅದರಲ್ಲಿ ಆಂಶಿಕ ಯಶಸ್ಸು ಲಭಿಸುವುದು.

ಮೀನ
ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಸಮಸ್ಯೆ ಪರಿಹಾರದ ಸಂಕೇತ ತೋರುವುದು. ವಿರಮಿಸದೆ ಮುನ್ನಡೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!