April 7, 2026
Tuesday, April 7, 2026
spot_img

LIFE | ಜೀವನದಲ್ಲಿ ನೆನಪಾಗಿ ಉಳಿಯೋ crazy memories ಕ್ರಿಯೇಟ್ ಮಾಡೋರೇ ಸ್ನೇಹಿತರು! ಏನಂತೀರಾ?

ಜೀವನವನ್ನು ಹಿಂದೆ ತಿರುಗಿ ನೋಡಿದಾಗ, ಹೆಚ್ಚು ನೆನಪಾಗೋದು ದೊಡ್ಡ ಯಶಸ್ಸುಗಳಿಗಿಂತಲೂ ಸಣ್ಣ ಸಣ್ಣ ಕ್ಷಣಗಳೇ. ಕಾರಣವಿಲ್ಲದೇ ನಕ್ಕ ಕ್ಷಣಗಳು, ಏಕಾಏಕಿ ಮಾಡಿದ ಪ್ಲಾನ್‌ಗಳು, ರಾತ್ರಿ ಹೊತ್ತು ನಡೆದ endless ಮಾತುಕತೆಗಳು — ಇವೆಲ್ಲವೂ ನಮ್ಮ ನೆನಪುಗಳಲ್ಲಿ ಸದಾ ಜೀವಂತವಾಗಿರುತ್ತವೆ. ಆ ಕ್ಷಣಗಳ ಹಿಂದೆ ಹೆಚ್ಚು ಬಾರಿ ಇರುವವರು, ನೆನಪಾಗುವವರು ಸ್ನೇಹಿತರು ಮಾತ್ರ.

ಸ್ನೇಹಿತರು ನಮ್ಮ ಜೀವನಕ್ಕೆ ಕೇವಲ company ಕೊಡೋದಿಲ್ಲ; ಅವರು ಸಾಮಾನ್ಯ ದಿನಗಳನ್ನೇ ವಿಶೇಷವಾಗಿಸುತ್ತಾರೆ. ಯಾವ ಪ್ಲಾನ್ ಇಲ್ಲದೇ ಹೊರಗೆ ಹೋಗಿ, ಆ ದಿನವನ್ನೇ ನೆನಪಿನಲ್ಲಿ ಉಳಿಯುವಂತೆ ಮಾಡೋದು ಅವರಿಂದಲೇ. ಕೆಲವೊಮ್ಮೆ ಅಷ್ಟು ದೊಡ್ಡ ವಿಷಯವೇನೂ ಆಗಿರೋದಿಲ್ಲ, ಆದರೂ ಆ ಕ್ಷಣಗಳು ನಮ್ಮ ಮುಖದಲ್ಲಿ ವರ್ಷಗಳ ನಂತರವೂ ನಗು ತರಿಸುತ್ತವೆ.

ಇದನ್ನೂ ಓದಿ:

ಜೀವನದ ಒತ್ತಡ, ಜವಾಬ್ದಾರಿಗಳ ನಡುವೆ ಸ್ನೇಹಿತರು ಒಂದು fresh air ತರಹ. ಅವರ ಜೊತೆ ಇದ್ದಾಗ ಸಮಯ ಹೇಗೆ ಕಳೆಯುತ್ತದೆ ಅನ್ನೋದೂ ಗೊತ್ತಾಗೋದಿಲ್ಲ. ನಗು, ಸಣ್ಣ ಜಗಳ, ಮತ್ತೆ patch up ಇದೇ ಸ್ನೇಹದ ಸೌಂದರ್ಯ.

ಕೊನೆಗೆ, ಜೀವನದಲ್ಲಿ ವರ್ಷಗಳು ಕಳೆಯುತ್ತವೆ, ಜನರು ಬದಲಾಗುತ್ತಾರೆ, ಸ್ಥಳಗಳು ಬದಲಾಗುತ್ತವೆ. ಆದರೆ ಸ್ನೇಹಿತರ ಜೊತೆ ಕ್ರಿಯೇಟ್ ಮಾಡಿದ crazy memories ಮಾತ್ರ ಯಾವತ್ತೂ ಹಳೆಯದಾಗೋದಿಲ್ಲ. ಅವೇ ನಮ್ಮ ಜೀವನದ ನಿಜವಾದ ಕಲರ್ ಫುಲ್ ನೆನಪು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !