ಜೀವನದಲ್ಲಿ ನಾವು ಸಾಧಿಸಬೇಕೆಂದು ಹಲವಾರು ಕನಸುಗಳನ್ನು ಕಟ್ಟುತ್ತೇವೆ. ಆದರೆ ಆ ಕನಸುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಏನೋ ಒಂದು ನಮ್ಮನ್ನು ತಡೆಯುತ್ತದೆ. ಹೊರಗಿನ ಅಡ್ಡಿಗಳಿಗಿಂತ ಹೆಚ್ಚು ಬಾರಿ, ಆ ಅಡ್ಡಿ ನಮ್ಮೊಳಗೇ ಇರುತ್ತದೆ ಅದು ಕೂಡ ಭಯದ ರೂಪದಲ್ಲಿ.
“ನನಗೆ ಆಗುತ್ತಾ?”, “ತಪ್ಪಾದ್ರೆ?”, “ಜನರು ಏನು ಅಂದುಕೊಳ್ಳುತ್ತಾರೆ?” ಇಂತಹ ಪ್ರಶ್ನೆಗಳು ನಮ್ಮ ಹೆಜ್ಜೆಗಳನ್ನು ನಿಧಾನವಾಗಿ ನಿಲ್ಲಿಸುತ್ತವೆ. ಅವಕಾಶ ನಮ್ಮ ಮುಂದೆ ಇದ್ದರೂ, ನಾವು ಒಂದು ಹೆಜ್ಜೆ ಹಿಂದೆ ಸರಿಯುತ್ತೇವೆ. ಇದೇ ಭಯ ನಮ್ಮ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ.
ಭಯ ಇರುವುದು ತಪ್ಪಲ್ಲ. ಅದು ಸಹಜ. ಆದರೆ ಅದಕ್ಕೆ ನಮ್ಮ ನಿರ್ಧಾರಗಳನ್ನು ನಿಯಂತ್ರಿಸಲು ಬಿಡುವುದು ಮಾತ್ರ ಸಮಸ್ಯೆ. ಭಯವನ್ನು ತಪ್ಪಿಸಿಕೊಳ್ಳಲು ನಾವು ಪ್ರಯತ್ನಿಸಿದಷ್ಟು, ಅದು ಇನ್ನಷ್ಟು ದೊಡ್ಡದಾಗಿ ಕಾಣುತ್ತದೆ. ಆದರೆ ಅದನ್ನೇ ಎದುರಿಸಿದಾಗ, ಅದು ನಿಧಾನವಾಗಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
ಇದನ್ನೂ ಓದಿ:
ಜೀವನದಲ್ಲಿ ಯಶಸ್ವಿಯಾದವರು ಭಯವಿಲ್ಲದವರಲ್ಲ. ಅವರು ಭಯ ಇದ್ದರೂ ಮುಂದಕ್ಕೆ ಸಾಗಿದವರು. ಅವರು “ನನಗೆ ಭಯವಿದೆ” ಅಂತ ಒಪ್ಪಿಕೊಂಡರೂ, “ಆದ್ರೂ ನಾನು ಪ್ರಯತ್ನಿಸುತ್ತೇನೆ” ಎಂದು ನಿರ್ಧರಿಸಿದ್ದಾರೆ.
ಹೀಗಾಗಿ ಒಂದು ಸಣ್ಣ ಪ್ರಶ್ನೆ ನಿಮಿಗೆ —
ನಿಮ್ಮನ್ನು ತಡೆಯುತ್ತಿರುವುದು ಪರಿಸ್ಥಿತಿಗಳಾ… ಅಥವಾ ನಿಮ್ಮೊಳಗಿನ ಭಯವಾ?
ನೀವು ಆ ಭಯವನ್ನು ದಾಟಿದ ಕ್ಷಣದಿಂದಲೇ, ನಿಮ್ಮ ದಾರಿ ಸ್ಪಷ್ಟವಾಗುತ್ತದೆ.
ಯಾಕೆಂದರೆ ಯಶಸ್ಸಿಗೆ ಅಡ್ಡಿ ಹೊರಗಿಲ್ಲ…
ಅದು ನಮ್ಮೊಳಗೇ ಇದೆ.



