September 24, 2026
Thursday, September 24, 2026
spot_img

ಜೀವನ ಎನ್ನುವುದು ಸುದೀರ್ಘ ಪಯಣ: ಹೊಸ ಸಿನಿಮಾಗಾಗಿ ಆಡಿಷನ್ಸ್‌ ಕಾಲ್‌ ಮಾಡಿದ ರಿಷಬ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಹಳಷ್ಟು ಮಂದಿಗೆ ಟ್ಯಾಲೆಂಟ್‌ ಇರುತ್ತದೆ ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕು. ಇಂಡಸ್ಟ್ರಿಯ ಒಳಕ್ಕೆ ಹೇಗೆ ಹೋಗಬೇಕು ಎನ್ನುವುದು ಗೊತ್ತಿರುವುದಿಲ್ಲ. ಇಂತಹ ಪ್ರತಿಭೆಗಳಿಗೆ ರಿಷಭ್‌ ಶೆಟ್ಟಿ ಸುವರ್ಣಾವಕಾಶವನ್ನು ನೀಡಿದ್ದಾರೆ.

ರಿಷಬ್‌ ಶೆಟ್ಟಿ ಫಿಲಂಸ್‌ ಕಡೆಯಿಂದ ಸಿನಿಮಾ ಇಂಡಸ್ಟ್ರಿಗೆ ಗೋಲ್ಡನ್‌ ಟಿಕೆಟ್‌ ನೀಡಲಾಗುತ್ತಿದೆ.ಸಿನಿಮಾ ರಂಗದಲ್ಲಿ ಆಸಕ್ತಿ ಇರುವ ಜನರು ಆಡಿಷನ್ಸ್‌ನಲ್ಲಿ ಭಾಗಿಯಾಗಬಹುದು ಟ್ಯಾಲೆಂಟ್‌ ಇದ್ದಲ್ಲಿ ಚಾನ್ಸ್‌ ಖಂಡಿತ ಎಂದು ರಿಷಭ್‌ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದು, ಆಡಿಷನ್ಸ್‌ ಮಾಡುತ್ತಿದ್ದೇವೆ ಎಂದು ರಿಷಭ್‌ ಹೇಳಿದ್ದಾರೆ.

ನಿಮ್ಮ ಸಿನಿಮಾ ರಂಗದ ಪ್ರಯಣ ಇಲ್ಲಿಂದಲೇ ಆರಂಭವಾಗಬಹುದು. ಒಂದು ಸಿನಿಮಾ ಕಥೆ ಸಿದ್ಧ ಮಾಡುತ್ತಿದ್ದೇವೆ. ರಿಷಬ್ ಶೆಟ್ಟಿ ಫಿಲ್ಮ್ಸ್‌ನ ಈ ರೋಚಕ ಹೊಸ ಪ್ರಾಜೆಕ್ಟ್ ಭಾಗವಾಗಲು ಹೊಸ ಪ್ರತಿಭೆಗಳನ್ನು ಹುಡುಕುತ್ತಿದ್ದೇವೆ. ನೀವು ಪ್ರತಿಭಾವಂತರಾಗಿದ್ದರೆ, ನಿಮಗೆ ಇದಕ್ಕೆ ಬೇಕಾದ ಸಾಮರ್ಥ್ಯವಿದೆ ಎಂದು ನಿಮಗೆ ಅನ್ನಿಸಿದರೆ, ಸಿನಿಮಾ ಲೋಕಕ್ಕೆ ಕಾಲಿಡಲು ಇದೊಂದು ಉತ್ತಮ ಅವಕಾಶವಾಗಬಹುದು. ಬನ್ನಿ, ಈ ಪಯಣದ ಭಾಗವಾಗಿ ಎಂದು ಹೇಳಿದ್ದಾರೆ. ಜೀವನ ಒಂದು ಪಯಣ, ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿ ಎಂದಿರುವ ರಿಷಬ್ ಶೆಟ್ಟಿ, ರಿಷಬ್ ಶೆಟ್ಟಿ ಫಿಲ್ಮ್ಸ್ ಆಡಿಷನ್/ ಕಾಸ್ಟಿಂಗ್ ಕಾಲ್ ಇದು. ಎಲ್ಲಾ ಆಸಕ್ತ ನಟ-ನಟಿಯರಿಗೆ ಆಹ್ವಾನ. ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗೆ ಹೊಸ ಪ್ರತಿಭೆಗಳ ಹುಟುಕಾಟದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

https://www.instagram.com/p/DdqKFwQCepU

ಕಂಡೀಷನ್ಸ್‌ ಏನು?

ಅಪ್ಲೇ ಮಾಡಲು ಕೆಲವೊಂದು ಕಂಡೀಷನ್ಸ್‌ ಇವೆ. ಅದನ್ನು ನೀವು ಫಾಲೋ ಮಾಡಬೇಕು ಎಂದು ರಿಷಬ್‌ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಪುರುಷರಿಗೆ 20 ರಿಂದ 65 ವರ್ಷ, ಮಹಿಳೆಯರು 20 ರಿಂದ 60 ವರ್ಷ ನಡುವೆ ಇರಬೇಕು. ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ಹೊಸ ಪ್ರತಿಭೆಗಳು, ಉತ್ತರ ಕರ್ನಾಟಕದ ಭಾಷಾಶೈಲಿ ತಿಳಿದಿರುವವರು ಇದೇ ಅಕ್ಟೋಬರ್ 02 ರಂದು ಬೆಳಗ್ಗೆ 09 ರಿಂದ ಸಂಜೆ 06 ಗಂಟೆಯೊಳಗೆ ಬೆಂಗಳೂರಿನ ಜಯನಗರದ 4ನೇ ಬ್ಲಾಕ್‌ನಲ್ಲಿರುವ ವಿಜಯಾ ಕಾಲೇಜಿಗೆ ಆಗಮಿಸಲು ಸೂಚನೆ ನೀಡಲಾಗಿದೆ.

ಮತ್ಯಾಕೆ ತಡ ನಿಮ್ಮಲ್ಲಿ ಟ್ಯಾಲೆಂಟ್‌ ಇದೆ ಎಂದಾದರೆ ಆಡಿಷನ್ಸ್‌ನಲ್ಲಿ ಮಿಸ್‌ ಮಾಡದೇ ಭಾಗಿಯಾಗಿ..

Must Read