February 1, 2026
Sunday, February 1, 2026
spot_img

ಜೀವ ರಕ್ಷಕ ಔಷಧಿಗಳು ಟ್ಯಾಕ್ಸ್ ಫ್ರೀ | ಇದು ಅದ್ಭುತ ಬೆಳವಣಿಗೆ: ಬಜೆಟ್‌ಗೆ ಸಂಸದ ಗೋವಿಂದ ಕಾರಜೋಳ ಮೆಚ್ಚುಗೆ

ಹೊಸದಿಗಂತ ವರದಿ ಚಿತ್ರದುರ್ಗ:

ಒಟ್ಟು 17 ಜೀವರಕ್ಷಕ ಔಷಧಿಗಳಿಗೆ ಬಜೆಟ್‌ನಲ್ಲಿ ಟ್ಯಾಕ್ಸ್ ಫ್ರೀ ಮಾಡಿರುವುದು ಅದ್ಭುತ ಬೆಳವಣಿಗೆ ಎಂದು ಸಂಸದ ಗೋವಿಂದ ಕಾರಜೋಳ ಕೇಂದ್ರ ಸರ್ಕಾರದ ಬಜೆಟ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅವರು, ಇದರಿಂದ ಕ್ಯಾನ್ಸರ್‌ನಂಥ ಮರಕ ಕಾಯಿಲೆಯಿಂದ ಬಳಲುವವರಿಗೆ ತುಂಬಾ ಅನುಕೂಲವಾಗಲಿದೆ. ಮಾರಕ ರೋಗಗಳಿಂದ ಬಳಳುತ್ತಿರುವ ಬಡವರಿಗೆ ಔಷಧಿ ಖರೀದಿಸುವ ಶಕ್ತಿ ಇರಲಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಬಡವರಿಗೆ ಸಹಾಯವಾಗಲಿದೆ ಎಂದಿದ್ದಾರೆ.

ರೈತರ ಆದಾಯ ಹೆಚ್ಚಿಸಲು ತ್ರಂತಜ್ಞಾನ ಮತ್ತು ನೀರಾವರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಣ್ಣ ಅತಿಸಣ್ಣ ರೈತರಿಗೆ ಹೆಚ್ಚಿನ ಸೌಲಭ್ಯಕ್ಕೆ ಒತ್ತು ನೀಡಿರುವುದು ಮಹತ್ವದ ಬೆಳೆವಣಿಗೆ. ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಪಾರಂಪರಿಕ ಕೈಗಾರಿಕೆ ವಲಯಗಳಿಗೆ ಉತ್ತೇಜನ ನೀಡಲಾಗಿದೆ. ಕುಲಕಸುಬು, ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಆಶಾದಾಯಕ ಬೆಳೆವಣಿಗೆ.

ಶಿಕ್ಷಣ ಮತ್ತು ಆರೋಗ್ಯಕ್ಕೆ ಜನರು ವೆಚ್ಚ ಮಾಡುವುದು ಖರ್ಚಲ್ಲ ಬಂಡವಾಳ ಹೂಡಿಕೆ ಎಂಬ ಮಹತ್ವದ ವಿಷಯ. ಇದರಿಂದ ಜನಸಾಮಾನ್ಯರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಅವಕಾಶ ದೊರೆಯಲಿದೆ. ಕರಾವಳಿ ಪ್ರದೇಶದ ಮೀನುಗಾರಿಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಇದರಿಂದ ಅವರಿಗೆ ಹೆಚ್ಚಿನ ಉದ್ಯೋಗಕ್ಕೆ ಅವಕಾಶವಾಗಲಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !