Life Secret | ಜೀವನದಲ್ಲಿ ಖುಷಿಯಾಗಿರ್ಬೇಕು ಅಂದ್ರೆ ಈ ವಿಷ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

ನಮ್ಮ ಜೀವನದಲ್ಲಿ ಖುಷಿಯಾಗಿದ್ದಾಗ ದುಃಖದಲ್ಲಿದ್ದಾಗ ನಮ್ಮ ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಅದನ್ನು ಹಂಚಿಕೊಳ್ಳುತ್ತೇವೆ. ಆದರೆ ಕೆಲವು ವಿಷಯಗಳಿವೆ ಅವುಗಳನ್ನು ಆಪ್ತರೊಂದಿಗೆ ಆಗಲಿ ಅಥವಾ ಇನ್ಯಾರೊಂದಿಗೂ ಹೇಳಿಕೊಳ್ಳುವುದು ಉತ್ತಮವಲ್ಲ.

ನಿಮ್ಮ ಆದಾಯ
ನಿಮಗೆ ಆದಾಯ ಎಲ್ಲಿಂದ ಬರುತ್ತೆ? ಎಷ್ಟು ಬರುತ್ತೆ ಎಂಬ ವಿಷಯವನ್ನು ಯಾರೊಂದಿಗೂ ಹೇಳಬೇಡಿ. ಅದನ್ನು ಕೇಳಿ ಅಸೂಯೆ ಪಡುವವರೇ ಹೆಚ್ಚು.

ಮುಂದಿನ ಪ್ಲ್ಯಾನ್
ನಿಮ್ಮ ಮುಂದಿನ ಪ್ಲ್ಯಾನ್ ಏನು ಅಂತ ಯಾರೊಂದಿಗೂ ಹೇಳಬೇಡಿ. ಯಾಕೆಂದ್ರೆ ಜನ ನಿಮ್ಮ ಪ್ಲ್ಯಾನ್​ಗಳನ್ನು ಹಾಳು ಮಾಡೋಕೆ ಕಾಯುತ್ತಿರುತ್ತಾರೆ.

ಫೇಲ್ಯೂರ್
ನಿಮ್ಮ ಫೇಲ್ಯೂರ್ ಗಳನ್ನೂ ಹೇಳಿದ್ರೆ ಅವರು ನಿಮ್ಮ ನ್ನು ನೋಡುವ ದೃಷ್ಟಿಯೇ ಬೇರೆ ಇರುತ್ತದೆ. ಕೆಲಸ, ಪರಿಶ್ರಮ ಎಲ್ಲವನ್ನು ಯಾರಿಗೂ ಗೊತ್ತಾಗದಂತೆ ಮಾಡಿ ಮುಗಿಸಿ, ನಿಮ್ಮ ಸಾಧನೆಯನ್ನು ಮಾತ್ರ ಜಗತ್ತಿಗೆ ತಿಳಿಸಿ.

ವೀಕ್​ನೆಸ್​
ಕಾಲ ಇದ್ದಂತೆಯೇ ಇರುವುದಿಲ್ಲ. ನಿಮ್ಮ ವೀಕ್​ನೆಸ್​ ಇನ್ನೊಬ್ಬರಿಗೆ ಬಲವಾದ ಆಯುಧ ಆಗಬಹುದು. ನಿಮ್ಮ ವೀಕ್​ನೆಸ್​ ಉಪಯೋಗಿಸಿಕೊಂಡು ಅವರ ಕಾರ್ಯ ಸಾಧಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!