April 10, 2026
Friday, April 10, 2026
spot_img

LIFE | ಪೀಸ್ ಫುಲ್ ಆಗಿ ಬದುಕೋದು ಯಾಕೆ ಇಷ್ಟು ಕಷ್ಟ?

ಒಮ್ಮೆ ಯೋಚ್ನೆ ಮಾಡಿದಾಗ ಶಾಂತಿಯಾಗಿ ಬದುಕೋದು ಅಂದ್ರೆ ತುಂಬಾ ದೊಡ್ಡ ವಿಷಯವೇನೂ ಅಲ್ಲ ಅನ್ಸುತ್ತೆ….
ಆದರೆ ನಿಜ ಜೀವನದಲ್ಲಿ ಅದೇ ಅತಿ ಕಷ್ಟವಾದ ಕೆಲಸ.

ಎಲ್ಲವೂ ಸರಿಯಾಗಿದ್ರೂ ಮನಸ್ಸು ಶಾಂತವಾಗಿರುವುದಿಲ್ಲ. ಯಾಕೆಂದರೆ ನಮ್ಮ ಜೀವನದಲ್ಲಿ ಗದ್ದಲ ಹೊರಗಿಂತ ಒಳಗೆ ಹೆಚ್ಚು. ಕೆಲಸದ ಒತ್ತಡ, ಜನರ ನಿರೀಕ್ಷೆ, ಹೋಲಿಕೆ, ಭವಿಷ್ಯದ ಚಿಂತೆ ಇವೆಲ್ಲ ನಿಧಾನವಾಗಿ ಮನಸ್ಸಿನ ಮೇಲೆ ಭಾರವಾಗುತ್ತವೆ.

ನಾವು ಶಾಂತಿಯನ್ನು ಹೊರಗಡೆ ಹುಡುಕುತ್ತೇವೆ. “ಇದು ಸಿಕ್ಕಿದ್ರೆ ನಾನು ಹ್ಯಾಪಿ,” “ಅದು ಆದ್ರೆ ನನಗೆ ಶಾಂತಿ” ಅಂತ ಯೋಚಿಸುತ್ತೇವೆ. ಆದರೆ ಒಂದು ಸತ್ಯ ಪರಿಸ್ಥಿತಿ ಯಾವತ್ತೂ ಪರ್ಫೆಕ್ಟ್ ಆಗೋದಿಲ್ಲ.

ಶಾಂತಿ ಹೊರಗಿನ ಪರಿಸ್ಥಿತಿಯಲ್ಲಿ ಅಲ್ಲ… ಅದು ನಮ್ಮ ಮನಸ್ಸಿನೊಳಗಿನ ಆಯ್ಕೆ.

ಹೆಚ್ಚು ಯೋಚನೆ ಮಾಡೋದು, ಎಲ್ಲರಿಗೂ ಇಷ್ಟವಾಗಬೇಕು ಅನ್ನೋ ಒತ್ತಡ, ನಮ್ಮ ಭಾವನೆಗಳನ್ನು ಒತ್ತಿಹಾಕೋದು ಇವುಗಳೇ ನಮ್ಮ ಶಾಂತಿಯನ್ನು ಕದ್ದುಕೊಂಡು ಹೋಗುತ್ತವೆ. ನಾವು “ಬಲವಾಗಿರಬೇಕು” ಅನ್ನೋ ಕಾರಣಕ್ಕೆ ನಮ್ಮ ನಿಜವಾದ ಫೀಲ್‌ಗಳನ್ನು ಗಮನಿಸೋದಿಲ್ಲ.

ಇದನ್ನೂ ಓದಿ:

ಕೆಲವೊಮ್ಮೆ ಪೀಸ್‌ಫುಲ್ ಆಗಿ ಬದುಕೋದು ಅಂದ್ರೆ ಎಲ್ಲವನ್ನೂ ಸರಿಪಡಿಸುವುದು ಅಲ್ಲ. ಕೆಲವನ್ನೇ ಬಿಡುವುದು. ಕೆಲವರಿಂದ ದೂರವಾಗುವುದು. ಕೆಲ ನಿರೀಕ್ಷೆಗಳನ್ನು ಕಡಿಮೆ ಮಾಡುವುದು.

ನಿಧಾನವಾಗಿ ಬದುಕಿ. ನಿಮ್ಮ ಗತಿಯಲ್ಲೇ ಸಾಗಿರಿ. ಎಲ್ಲವನ್ನೂ ನಿಯಂತ್ರಿಸಲು ಪ್ರಯತ್ನಿಸಬೇಡಿ.

ಯಾಕೆಂದರೆ ಶಾಂತಿ ಅಂದ್ರೆ ಸಮಸ್ಯೆಗಳಿಲ್ಲದ ಜೀವನ ಅಲ್ಲ…
ಅವುಗಳ ನಡುವೆ ಕೂಡ ಮನಸ್ಸು ಹಗುರವಾಗಿರೋದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !