ಸುರಕ್ಷಿತವಾಗಿ, ಸುಲಭವಾಗಿ, ಒತ್ತಡವಿಲ್ಲದೆ ಸಾಗುವ ಜೀವನ ನಮಗೆ ಇಷ್ಟವಾಗುತ್ತೆ. ಅದೇ ನಮ್ಮ ಕಂಫರ್ಟ್ ಝೋನ್. ಇಲ್ಲಿ ಅಪಾಯ ಕಡಿಮೆ, ಅನಿಶ್ಚಿತತೆ ಕಡಿಮೆ… ಆದರೆ ಒಂದು ಸತ್ಯ, ಬೆಳವಣಿಗೆ ಕೂಡ ಕಡಿಮೆ.
ನಾವು ಹೊಸದೇನನ್ನಾದರೂ ಪ್ರಯತ್ನಿಸಬೇಕೆಂದಾಗ ಮೊದಲಿಗೆ ಬರುವ ಭಾವನೆ ಭಯ. “ನನ್ನ ಕೈಯಿಂದ ಆಗುತ್ತಾ?” “ತಪ್ಪಾದ್ರೆ?” ಅನ್ನೋ ಪ್ರಶ್ನೆಗಳು ನಮ್ಮನ್ನು ಮತ್ತೆ ಭಯಕ್ಕೆ ತಳ್ಳುತ್ತವೆ. ಆದರೆ ಅದೇ ಭಯದ ಆಚೆ ಇರುವುದೇ ನಿಜವಾದ ಅವಕಾಶ.
ಕಂಫರ್ಟ್ ಝೋನ್ ನಲ್ಲಿ ನಾವು ಬದುಕುತ್ತೇವೆ… ಆದರೆ ಬದುಕಿನ ಅರ್ಥವನ್ನು ಅನುಭವಿಸುವುದಿಲ್ಲ. ಹೊಸ ಸವಾಲುಗಳು, ಹೊಸ ಅನುಭವಗಳು, ಹೊಸ ಪಾಠಗಳು ಇವೆಲ್ಲವೂ ನಾವು ಆ ಗಡಿ ದಾಟಿದಾಗ ಮಾತ್ರ ಸಿಗುತ್ತವೆ.
ಇದನ್ನೂ ಓದಿ:
ಹೌದು, ಮೊದಲ ಹೆಜ್ಜೆ ಕಷ್ಟವಾಗುತ್ತದೆ. ತಪ್ಪುಗಳೂ ಆಗಬಹುದು. ಕೆಲವೊಮ್ಮೆ ನಾವು ವಿಫಲವಾಗಬಹುದು. ಆದರೆ ಅದೇ ಕ್ಷಣಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಆತ್ಮವಿಶ್ವಾಸ ಕೊಡುತ್ತವೆ.
ಜೀವನದಲ್ಲಿ ನೆನಪಾಗೋ ಕ್ಷಣಗಳು ಯಾವುದು ಗೊತ್ತಾ? ನಾವು ಭಯಪಟ್ಟರೂ ಧೈರ್ಯವಾಗಿ ಒಂದು ಹೆಜ್ಜೆ ಇಟ್ಟ ಕ್ಷಣ.
ಹೀಗಾಗಿ ಕಂಫರ್ಟ್ ಝೋನ್ ನಲ್ಲಿ ಸುರಕ್ಷಿತವಾಗಿರುವುದಕ್ಕಿಂತ, ಸ್ವಲ್ಪ ಅಸೌಕರ್ಯಕ್ಕೆ ಸಿದ್ಧರಾಗಿ. ಯಾಕೆಂದರೆ ನಿಜವಾದ ಜೀವನ ಸುಲಭದಲ್ಲಿಲ್ಲ… ಅದು ಸವಾಲುಗಳಲ್ಲಿದೆ.
ಒಮ್ಮೆ ಹೊರಗೆ ಬನ್ನಿ…
ನಿಮ್ಮ ಜೀವನ ಎಷ್ಟು ದೊಡ್ಡದು ಅನ್ನೋದು ನಿಮಗೆ ತಾನೇ ಗೊತ್ತಾಗುತ್ತದೆ.



