Friday, December 8, 2023

Latest Posts

REAL HERO | ಮುಳುಗುತ್ತಿದ್ದ ಮಕ್ಕಳ ಜೀವ ಉಳಿಸಿದ ಜೀವ ರಕ್ಷಕ ಸಿಬ್ಬಂದಿ

ಹೊಸದಿಗಂತ ವರದಿ ಗೋಕರ್ಣ:

ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗಿ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದ ಇಬ್ಬರು ಮಕ್ಕಳನ್ನು ಜೀವ ರಕ್ಷಕ ಸಿಬ್ಬಂದಿಗಳು ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿ ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಪ್ರವಾಸಿ ತಾಣ ಗೋಕರ್ಣದಲ್ಲಿ ರವಿವಾರ ಮದ್ಯಾಹ್ನ ಸಂಭವಿಸಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆಲಿಯಾ ಖಾನ್(13) ಮತ್ತು ಸುಭಾನ ಖಾನ್ (12) ಇವರು ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಸಮುದ್ರದ ನೀರಿನಲ್ಲಿ ಇಳಿದ ಸಂದರ್ಭದಲ್ಲಿ ಭಾರೀ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರ್ಯಪ್ರವೃತ್ತರಾದ ಜೀವ ರಕ್ಷಕ ಸಿಬ್ಬಂದಿ ಮೋಹನ ಅಂಬಿಗ, ಶಿವಪ್ರಸಾದ ಅಂಬಿಗ, ಲೋಕೇಶ ಹರಿಕಂತ್ರ, ಮೇಲ್ವಿಚಾರಕ ರವಿ ನಾಯ್ಕ ಪ್ರವಾಸಿ ಮಿತ್ರ ರಾಜೇಶ ಅಂಬಿಗ ಅವರು ಕಡಲಿಗಿಳಿದು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ವಾರಾಂತ್ಯ ಇರುವುದರಿಂದ ಪ್ರವಾಸಿ ತಾಣ ಗೋಕರ್ಣಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ಕಡಲ ಅಬ್ಬರ ಹೆಚ್ಚಿದ್ದರೂ ನೀರಿಗಿಳಿದು ಅಪಾಯಕ್ಕೆ ಸಿಲುಕುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!