LIFESTYLE| ರಿಲೇಷನ್‌ಶಿಪ್‌ನಲ್ಲಿ ಯಾವತ್ತೂ ಈ 5 ಪ್ರಮುಖ ವಿಷಯಗಳು ನಿಮ್ಮ ಗಮನದಲ್ಲಿರಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದ್ಯ ಮದುವೆಗೂ ಮುನ್ನ ಡೇಟಿಂಗ್ ಮಾಡುವ ಟ್ರೆಂಡ್ ಇದೆ. ಇತ್ತೀಚೆಗೆ ಲಿವ್ ಇನ್ ರಿಲೇಶನ್ ಶಿಪ್ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ. ವಿವಾಹಪೂರ್ವ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧದಲ್ಲಿ ಮುಂದುವರಿಯುವ ಮೊದಲು ಕೆಲವು ಅಂಶಗಳ ಬಗ್ಗೆ ಯೋಚಿಸುವುದು ಬಹಳ ಮುಖ್ಯ.

ನೀವು ನಿಮ್ಮ ಜೀವನ ಸಂಗಾತಿಯ ಹುಡುಕಾಟದಲ್ಲಿದ್ದೀರಿ ನಿಮ್ಮ ಒಂದು ನಿರ್ಧಾರವು ನಿಮ್ಮ ಜೀವನದುದ್ದಕ್ಕೂ ನಿಮಗೆ ದುಃಖವನ್ನು ಉಂಟುಮಾಡಬಹುದು. ಕೆಲವೊಮ್ಮೆ ಕೆಟ್ಟ ಸಂಬಂಧದಿಂದ ಜೀವನ ನರಕವಾಗುತ್ತದೆ. ಅದಕ್ಕಾಗಿಯೇ ಮೊದಲು ಇತರರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಅದರಲ್ಲೂ ಸಂಬಂಧದಲ್ಲಿ ತೊಡಗುವ ಮುನ್ನ ಈ 5 ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  1. ನಿಯಂತ್ರಣ: ಯಾವಾಗಲೂ ಅನುಮಾನಾಸ್ಪದ ಅಥವಾ ನಿಮ್ಮ ಮೇಲೆ ಕಣ್ಣಿಡುವ ವ್ಯಕ್ತಿ ಎಂದಿಗೂ ಉತ್ತಮ ಸಂಗಾತಿಯಾಗಿರುವುದಿಲ್ಲ. ಪೊಸೆಸಿವಿನೆಸ್‌ ಒಳ್ಳೆಯೆದೇ ಆದರೆ ಅದು ಅತಿಯಾಗಬಾರದು.
  2.  ಸುಳ್ಳು ಹೇಳುವುದು: ಸತ್ಯವನ್ನು ಮರೆಮಾಚಿ ಅಥವಾ ಯಾವಾಗಲೂ ಸುಳ್ಳನ್ನು ಆಶ್ರಯಿಸುವ ಪಾರ್ಟ್ನರ್ ನಿಮ್ಮನ್ನು ಎಂದಿಗೂ ಸಂತೋಷಪಡಿಸುವುದಿಲ್ಲ.
  3. ಸ್ವಾರ್ಥ ಜನರಿಂದ ದೂರವಿರಿ:  ಉತ್ತಮ ಸಂಗಾತಿ ಎಂದರೆ ನಿಮ್ಮ ಆಸಕ್ತಿ, ವೃತ್ತಿ, ಹವ್ಯಾಸ ಇತ್ಯಾದಿಗಳನ್ನು ಗೌರವಿಸುವವ. ತಪ್ಪು ಮಾಡಿದರೆ ತಿದ್ದಿ ಹೇಳುವವ. ಆದರೆ, ಕೇವಲ ಆ ವ್ಯಕ್ತಿಯು ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ ಅಂತಾದರೆ ತಕ್ಷಣವೇ ಅವರಿಂದ ದೂರವಿರಿ.
  4. ವಿಧೇಯತೆ: ಯಾವುದೇ ವಿಚಾರದ ಬಗ್ಗೆ ವಿದೇಯತೆ ಇಲ್ಲದ ಮನುಷ್ಯ ಭವಿಷ್ಯದಲ್ಲಿ ಉತ್ತಮ ಸಂಗಾತಿಯಾಗಲಾರ ಎಂಬುದನ್ನು ನೆನಪಿಡಿ.
  5. ಬೆಂಬಲಿಸದ ವ್ಯಕ್ತಿ: ನಿಮ್ಮ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನಿಮ್ಮೊಂದಿಗೆ ಇರುವ ವ್ಯಕ್ತಿ ನಿಜವಾದ, ಒಳ್ಳೆಯ ಸಂಗಾತಿ. ಅಗತ್ಯವಿದ್ದಾಗ ಮಾತ್ರ ಬಳಸಿಕೊಳ್ಳುವ ವ್ಯಕ್ತಿ ಅತ್ಯಂತ ಮಾರಕ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!