ಹ್ಯಾಪಿನೆಸ್ ಅಂದ್ರೆ ದೊಡ್ಡದೇನೋ ಸಾಧಿಸೋದಲ್ಲ, ಅದು ಪುಟ್ಟ ಪುಟ್ಟ ಕ್ಷಣಗಳಲ್ಲಿ ಇರುತ್ತೆ. ಅದನ್ನ ನಾವು ಸರಿಯಾಗಿ ಅರ್ಥ ಮಾಡಿಕೊಂಡ್ರೆ ಯಾವ ಸಂದರ್ಭದಲ್ಲೂ ಸಂತೋಷವಾಗಿರಬಹುದು.
ಹ್ಯಾಪಿನೆಸ್ ಗಾಗಿ ಕೆಲವು ಸಣ್ಣ ಸಣ್ಣ ವಿಷಯಗಳಿವೆ ನೀವು ಕೂಡ ಅದನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಹ್ಯಾಪಿ ಆಗಿರಬಹುದು…
ನಿಮ್ಮ ಫೇವರೆಟ್ ಪೀಪಲ್
ನಿಮ್ಮಿಷ್ಟದವರ ಜೊತೆ ಸಮಯ ಕಳೆಯೋದು ನಿಮ್ಮ ಜೀವನವನ್ನ ಸಂತೋಷದಲ್ಲಿ ತುಂಬಿಡಬಹುದು. ನಿಮ್ಮ ಫ್ರೆಂಡ್ಸ್, ನಿಮ್ಮ ಫ್ಯಾಮಿಲಿ ಜೊತೆ ಕಳೆಯುವ ಕೆಲವು ಸಮಯ ಕೂಡ ನಿಮ್ಮ ಜೀವನವನ್ನ ಬದಲಾಯಿಸಬಹುದು.
ಪ್ರಕೃತಿ ಜೊತೆ ಸಂಚಾರ
ಮಳೆ ಬಿದ್ದಾಗ ಬರೋ ಮಣ್ಣಿನ ಸುಗಂಧ, ಮುಂಜಾನೆಯ ಮಂಜು ಕವಿದ ನೇಚರ್ , ಹಕ್ಕಿಗಳ ಹಾಡು, ಇದರ ಜೊತೆ ಸ್ವಲ್ಪ ವಾಕಿಂಗ್ ಇದು ನಿಮ್ಮ ಇಡೀ ದಿನವನ್ನ ಹ್ಯಾಪಿ ಆಗಿರಿಸೋಕೆ ಖಂಡಿತ ಸಹಾಯ ಮಾಡುತ್ತೆ.
ಟ್ರಾವೆಲಿಂಗ್
ಟ್ರಾವೆಲಿಂಗ್ ಅಂದ್ರೇನೆ ಏನೋ ಸಂತೋಷ. ಹೊಸ ಹೊಸ ಪ್ಲೇಸ್ ಗೆ ಭೇಟಿ ಕೊಡೋದು, ಅಲ್ಲಿನ ಜನರಲ್ಲಿ ಬೇರೆಯೋದು, ಆಹಾರ ಸವಿಯೋದು ಇದೆಲ್ಲ ಹೊಸ ಅನುಭವಗಳ ಜೊತೆ ಸಂತೋಷ ಕೊಡುತ್ತೆ.
ನಿಮ್ಮ ಫೇವರೆಟ್ ಸಾಂಗ್
ಯಾವುದೋ ಒಂದು ಹಾಡು ಕಿವಿಗೆ ಬಿದ್ದಾಗ ನಿಮ್ಮ ಹಳೆ ನೆನಪುಗಳು ಕಣ್ಣ ಮುಂದೆ ಬಂದು ಹೋಗುತ್ತೆ. ಹಾಡಿಗೆ ಅಂತಹ ಶಕ್ತಿ ಇದೆ. ಅದು ನಿಮ್ಮ ಮೂಡ್ ನ ಒಂದು ಕ್ಷಣದಲ್ಲಿ ಹ್ಯಾಪಿಯಾಗಿ ಬದಲಾಯಿಸುತ್ತೆ.
ನಿಮ್ಮ ಫೇವರೆಟ್ ಪೆಟ್
ನೀವೇ ಸಾಕಿರುವ ನಾಯಿ, ಬೆಕ್ಕು, ಹಸು ಇವುಗಳ ಜೊತೆ ಟೈಮ್ ಸ್ಪೆಂಡ್ ಮಾಡುವುದು ನಿಮ್ಮ ಲೈಫ್ ನಲ್ಲಿ ಹ್ಯಾಪಿಯಾಗಿರೋಕೆ ಇರುವ ಇನ್ನೊಂದು ಕಾರಣ. ಅವುಗಳು ಮಾಡೋ ತುಂಟಾಟ ನಿಮ್ಮ ಮುಖದ ಮೇಲೆ ನಗು ತರಿಸೋದಂತು ಖಂಡಿತ.