ಲೈಗರ್‌ ನಿರ್ದೇಶಕನ ಮನೆಗೆ ಭದ್ರತೆ: ಕೋರ್ಟ್‌ ಮೊರೆ ಹೋಗಲು ವಿತರಕರ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ ಲೈಗರ್‌ ಫ್ಲಾಪ್ ಆಗಿದ್ದಕ್ಕೆ ವಿತರಕರು ಮತ್ತು ಪ್ರದರ್ಶಕರು ಭಾರಿ ನಷ್ಟವನ್ನು ಅನುಭವಿಸಿದರು. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಎಲ್ಲಾ ವಿತರಕರು ಮತ್ತು ಪ್ರದರ್ಶಕರು ತಮ್ಮ ನಷ್ಟವನ್ನು ಸರಿದೂಗಿಸಲು ಪೂರಿ ಜಗನ್ನಾಥ್ ಅವರ ಸುತ್ತಲೂ ಸುತ್ತುತ್ತಿದ್ದಾರೆ. ನಿಮ್ಮ ಹಣ ಕೊಡುತ್ತೇವೆ ಆದರೆ ಸ್ವಲ್ಪ ಸಮಯ ಹಿಡಿಯುತ್ತದೆ ಎಂಬ ಫುರಿ ಜಗನ್ನಾಥ ಮಾತು ಕೇಳದ ವಿತರಕರು, ಪ್ರದರ್ಶಕರು ಹಣ ನೀಡದಿದ್ದರೆ ನಿಮ್ಮ ಮನೆ ಮುಂದೆ ಧರಣಿ ಮಾಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಿದ್ದು ಟಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಧರಣಿ ಕೂರುವಂಥ ಕೆಲಸ ಮಾಡಿ ಮಾನಹಾನಿ ಮಾಡಿದರೆ ನಾನು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು. ವಿತರಕ ವಾರಂಗಲ್ ಶ್ರೀನು ಮತ್ತು ಫಿನಿಶರ್ ಶೋಭಾನ್ ವಿರುದ್ಧ ಜಗನ್ನಾಥ್ ಪೊಲೀಸರಿಗೆ ದೂರು ಸಲ್ಲಿಸಿದ್ದು, ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಹಾಗಾಗಿ ನಮ್ಮ ಮನೆಗೆ ಭದ್ರತೆ ನೀಡುವಂತೆ ಕೇಳಿದ್ದಾರೆ. ಇದರೊಂದಿಗೆ ಪೊಲೀಸರು ಪೂರಿ ಜಗನ್ನಾಥ್ ಮನೆಯ ಭದ್ರತೆಗಾಗಿ ಪೊಲೀಸರನ್ನು ಇರಿಸಿದ್ದಾರೆ.

ಹೈದರಾಬಾದ್‌ನಲ್ಲಿ ಪುರಿ ಜಗನ್ನಾಥ್ ಇಲ್ಲದ ಕಾರಣ, ವಿತರಕರು ಧರಣಿಯನ್ನು ಮುಂದೂಡಿದ್ದಾರೆ. ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಈ ವಿಷಯದಲ್ಲಿ ನ್ಯಾಯಾಲಯವನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಈ ವಿವಾದ ಗಾಢವಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಅತಿಯಾದ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದ ವಿಜಯ್ ದೇವರಕೊಂಡ ಈಗ ಇಷ್ಟೆಲ್ಲಾ ಗಲಾಟೆ ನಡೆಯುತ್ತಿದ್ದರೂ ಸೈಲೆಂಟ್ ಆಗಿರುವುದು ಗಮನಾರ್ಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!