ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗುತ್ತಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯಲಿದೆ.
ಆದ್ರೆ ಇದೀಗ ಬೆಂಗಳೂರಿನಲ್ಲಿ ಸಂಜೆಯಿಂದ ತುಂತುರು ಮಳೆ ಆರಂಭಗೊಂಡಿದೆ. ಇದರ ಪರಿಣಾಮ ಆರ್‌ಸಿಬಿ ಪಂಜಾಬ್ ನಡುವಿನ ಪಂದ್ಯದ ಟಾಸ್ ವಿಳಂಬವಾಗಿದೆ.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಇದೀಗ ತುಂತುರು ಮಳೆ ಆರಂಭಗೊಂಡಿದೆ. ಹೀಗಾಗಿ ಪಿಚ್ ಮುಚ್ಚಲಾಗಿದೆ. ಮಳೆ ನಿಂತ ಕೂಡಲೇ ಪಂದ್ಯ ಆರಂಭಗೊಳ್ಳಲಿದೆ. ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಶ್ವದ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್ ಇದೆ. ಹೀಗಾಗಿ ಮಳೆ ನಿಂತ ತಕ್ಷಣೇ ನೀರು ಕ್ಷಣಾರ್ಥದಲ್ಲಿ ಹೀರಿ ಕೊಳ್ಳಲಿದೆ. ಹೀಗಾಗಿ ಪಂದ್ಯ ಹೆಚ್ಚಿನ ವಿಳಂಬವಿಲ್ಲದೆ ಆರಂಬಗೊಳ್ಳಲಿದೆ.