20 ವರ್ಷ ದಾಟಿದ ಮೇಲೆ ನಿಮ್ಮ ಆರೋಗ್ಯವನ್ನು ಅರಿಯಲು, ಹಾಗೂ ಗಂಭೀರ ರೋಗಗಳನ್ನು ತಡೆಯಲು ಕೆಳಗೆ ಕೊಟ್ಟಿರುವ ಈ ಪರೀಕ್ಷೆಗಳನ್ನು ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ಹೃದಯಾರೋಗ್ಯದ ತಪಾಸಣೆ :
ಹೃದಯದ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಪರೀಕ್ಷಿಸುವುದರಿಂದ ಹೃದಯಾಘಾತದ ಮುನ್ಸೂಚನೆ ಸಿಗಬಹುದು.
ಶರೀರದ ಸಕ್ಕರೆ ಮಟ್ಟ:
ಪ್ರಾಥಮಿಕ ಹಂತದಲ್ಲಿಯೇ ಡಯಾಬಿಟಿಸ್ ಪತ್ತೆಹಚ್ಚಲು ಸಹಾಯವಾಗುತ್ತದೆ.
ರಕ್ತದೊತ್ತಡ ತಪಾಸಣೆ:
ಹೆಚ್ಚಿನ ಅಥವಾ ಕಡಿಮೆ ರಕ್ತದೊತ್ತಡದ ಸಮಸ್ಯೆಗಳನ್ನು ಶೀಘ್ರದಲ್ಲೇ ಗುರುತಿಸಿ ತಡೆಗಟ್ಟಬಹುದು.
ಕೊಲೆಸ್ಟ್ರಾಲ್ ಮಟ್ಟ:
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿ ಇರಲಿಲ್ಲವೆಂದರೆ ಅದು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಇಅದನ್ನು ಸಹ ಪರೀಕ್ಷಿಸಿಕೊಳ್ಳಿ.
ಆಮ್ಲಜನಕ ಮಟ್ಟ ಮತ್ತು ಯಕೃತ್ ಪರೀಕ್ಷೆ:
ಯಕೃತಿನ ಆರೋಗ್ಯ ಮತ್ತು ಶರೀರದಲ್ಲಿ ಆಮ್ಲಜನಕದ ಹರಿವಿನ ಮಟ್ಟವನ್ನು ಅಳೆಯುವುದು ಅತ್ಯವಶ್ಯಕ.
ಈ ರೀತಿಯ ತಪಾಸಣೆಯು ನಿಮ್ಮ ಜೀವನ ಶೈಲಿಗೆ ತಕ್ಕಂತೆ ಅಗತ್ಯ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶಿಯಾಗಿ ನಿಂತು, ಆರೋಗ್ಯಕರ ಜೀವನವಿಧಾನಕ್ಕೆ ನೆರವಾಗುತ್ತದೆ.