Friday, October 7, 2022

Latest Posts

ಬಾಯ್‌ ಫ್ರೆಂಡ್‌ ಬದಲಾಯಿಸುವ ವಿದೇಶಿ ಮಹಿಳೆಯಂತೆ ..:‌ ನಿತೀಶ್‌ ಕುಮಾರ್ ವಿರುದ್ಧ ಕೈಲಾಶ್‌ ವಿಜಯ್‌ ವರ್ಗೀಯಾ ಟೀಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಮಹಾಘಟಬಂಧನ್‌ ಸೇರಿರುವ ಕುರಿತು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಅವರು ಟೀಕೆ ಮಾಡಿದ್ದು ಅವರನ್ನು ವಿದೇಶಿ ಮಹಿಳೆಗೆ ಹೋಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಜ್‌ ವರ್ಗೀಯಾ ಅವರು “ಸಿಎಂ ನಿತೀಶ್ ಕುಮಾರ್ ಅವರು ಯಾವುದೇ ಸಮಯದಲ್ಲಿ ಬಾಯ್ ಫ್ರೆಂಡ್ ಬದಲಾಯಿಸುವ ವಿದೇಶಿ ಮಹಿಳೆಯಂತೆ” ಎಂದಿದ್ದಾರೆ.

“ನಾನು ಕೆಲವು ದಿನಗಳ ಕಾಲ ವಿದೇಶದಲ್ಲಿದ್ದಾಗ, ಇಲ್ಲಿನ ಮಹಿಳೆಯರು ಯಾವಾಗ ಬೇಕಾದರೂ ತಮ್ಮ ಗೆಳೆಯರನ್ನು ಬದಲಾಯಿಸಿಕೊಳ್ಳುತ್ತಾರೆ ಎಂದು ಒಬ್ಬರು ಹೇಳಿದರು. ಬಿಹಾರದ ಮುಖ್ಯಮಂತ್ರಿಯೂ ಇದೇ. ಅವರು ಯಾರ ಕೈ ಹಿಡಿಯುತ್ತಾರೆ ಅಥವಾ ಬಿಡುತ್ತಾರೆ ಎಂದು ನಮಗೆ ತಿಳಿದಿಲ್ಲ, ”ಎಂದು ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!