ಸಿನೀಮಿಯ ರೀತಿ ಕಿಡ್ನಾಪರ್ ಕೈಗೆ ಕಚ್ಚಿ ಬಾಲಕ ಎಸ್ಕೇಪ್

ಹೊಸದಿಗಂತ ವರದಿ,ಮಂಡ್ಯ :

ಅಪಹರಣಕ್ಕೊಳಗಾದ ಬಾಲಕನೋರ್ವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಿಂದ ಆರೋಪಿಯ ಕೈ ಕಚ್ಚಿ ವ್ಯಾನ್‌ನಿಂದ ಜಿಗಿದು ತಪ್ಪಿಸಿಕೊಂಡಿರುವ ಸಿನೀಮಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಮಳವಳ್ಳಿ ತಾಲೂಕಿನ ಕೊದೇನಕೊಪ್ಪಲು ಗ್ರಾಮದ ಈರೇಗೌಡ ಎಂಬುವರ ಪುತ್ರ ಯೋಗೇಶ್ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದ ಬಾಲಕ. ಪಟ್ಟಣದ ಹೊರ ವಲಯದಲ್ಲಿರುವ ಮಾರೇಹಳ್ಳಿ ಆದರ್ಶ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿದ್ದ ಯೋಗೇಶ್ ಮಳವಳ್ಳಿಯ ಗೌಡಯ್ಯನಬೀದಿಯ 3ನೇ ಕ್ರಾಸ್‌ನಲ್ಲಿರುವ ಅವರ ಮಾವನ ಮನೆಯಲ್ಲಿದ್ದು, ಶಾಲೆಗೆ ಬೋಗಿ ಬರುವುದು ಮಾಡುತ್ತಿದ್ದ. ಎಂದಿನಂತೆ ಹಳೇ ಕೋರ್ಟ್ ಹಿಂಭಾಗದಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದ ವೇಳೆ ಮಂಗಳವಾರ ಬೆಳಗಿನ ಜಾವ 5.20ರ ಸಮಯದಲ್ಲಿ ಓಮಿನಿ ಕಾರಿನಲ್ಲಿ ಬಂದ ಮಂಕಿ ಕ್ಯಾಪ್ ಧರಿಸಿದ್ದ ಅಪಹರಣಕಾರರು, ಬಾಲಕನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಅಪಹರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!