ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಯಾಣದಲ್ಲಿ ಕಾಂಗ್ರೆಸ್ ಹೇಗೆ ಕೊಚ್ಚಿಹೋಗಿದೆ, ಅದೇ ರೀತಿ ಮಹಾರಾಷ್ಟ್ರದಲ್ಲೂ ಮಹಾ ವಿಕಾಸ್ ಅಘಾಡಿ (MVA) ಸರ್ವನಾಶವಾಗಲಿದೆಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಾಂಗ್ಲಿ ಜಿಲ್ಲೆಯಲ್ಲಿ ಶುಕ್ರವಾರ (ನ.08) ನಡೆದ ಚುನಾಚವಣೆ ಪ್ರಚಾರದಲ್ಲಿ ಮಾತನಾಡಿದರು. ಉದ್ಧವ್ ಠಾಕ್ರೆ ಅವರು ತಮ್ಮ ಮಗ(ಆದಿತ್ಯ ಠಾಕ್ರೆ) ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ. ಹಾಗೆಯೇ ಶರದ್ ಪವರ್ ತಮ್ಮ ಮಗಳು (ಸುಪ್ರಿಯಾ ಸುಳೆ) ಅದೇ ಹಾರೈಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ನ ನಾಯಕರು ಕೂಡ ಅದೇ ಹುದ್ದೆಗೆ(ಸಿಎಂ) ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ, ಸಿಎಂ ಹುದ್ದೆಗೆ ಹಲವರು ಬಟ್ಟೆ ಹೊಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ತಮ್ಮ ಪುತ್ರರನ್ನು ಮುಖ್ಯಮಂತ್ರಿ ಮಾಡಲು ಹೊರಟವರು ಮಹಾರಾಷ್ಟ್ರದ ಶ್ರೇಯೋಭಿವೃದ್ಧಿಗೆ ಮೊದಲು ಶ್ರಮಿಸಬೇಕು. ಇಲ್ಲಿನ ದೇವೇಂದ್ರ ಪಢ್ನವೀಸ್, ಏಕನಾಥ್ ಶಿಂಧೆ, ಅಜಿತ್ ಪವರ್ ಅವರ ಮಹಾಕೂಟ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ. ಅಲ್ಲದೇ, ಮೋದಿ ಅವರ ನಾಯಕತ್ವದಲ್ಲಿ ಈ ಪ್ರದೇಶ ಅಭಿವೃದ್ಧಿ ಸಾಧ್ಯವಾಗಲಿದೆ. ಮೋದಿ ನೀಡಿರುವ ಭರವಸೆಗಳನ್ನು ಈಡೇರಿಸಲು ನಾವು ಭಯಸುತ್ತೇವೆ. ಇಲ್ಲಿ ತನಕ ಕಾಂಗ್ರೆಸ್ ನೇತೃತ್ವದ ಕೂಟ ಯಾವ ಭರವಸೆಗಳನ್ನು ಈಡೇರಿಸಿಲ್ಲ ಎಂದು ಶಾ ಆರೋಪಿಸಿದರು.
ಹರಿಯಾಣದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಕೊಟ್ಯಾಂತರ ರೂ ಪಟಾಕಿ ಖರೀದಿಸಿದ್ದರು. ಆದರೆ, ಕೊನೆಗೆ ಬಿಜೆಪಿ ಕಾರ್ಯಕರ್ತರಿಗೆ ಪಟಾಕಿಗಳನ್ನು ಕೊಟ್ಟು ಹೋದರು. ಅದೇ ರೀತಿ ಇಲ್ಲಿ ಕೂಡ ಕಾಂಗ್ರೆಸ್ ನೇತೃತ್ವದ ಕೂಟ ನಾಶವಾಲಿದೆ’ ಎಂದರು.