ಚೀನಾದೊಂದಿಗೆ ಲಿಂಕ್:‌ 120 ಹೆಡರ್‌ ಗಳನ್ನು ನಿರ್ಬಂಧಿಸಿದ ಟೆಲಿಕಾಂ ಇಲಾಖೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದೊಂದಿಗೆ ಲಿಂಕ್‌ ಹೊಂದಿದ್ದ 120ಕ್ಕೂ ಹೆಚ್ಚು ಹೆಡರ್‌ಗಳನ್ನು ಭಾರತದ ಟೆಲಿಕಾಂ ಅಧಿಕಾರಿಗಳು ನಿರ್ಬಂಧಿಸಿರುವುದಾಗಿ ಗೃಹ ಸಚಿವಾಲಯ ಮಾಹಿತಿ ನೀಡಿದೆ. ಹೆಡರ್‌ಗಳು ಅಥವಾ ಸೆಂಡರ್‌ ಐಡಿ ಎಂದು ಕರೆಯಲ್ಪಡುವ ಇವುಗಳನ್ನು ಬ್ಯಾಂಕ್‌ಗಳು, ಮಾರ್ಕೆಟಿಂಗ್ ಸಂಸ್ಥೆಗಳು ಮತ್ತು ಸರ್ಕಾರಿ ಏಜೆನ್ಸಿಗಳಂತಹ ವಿವಿಧ ಘಟಕಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್‌ (SMS) ಕಳುಹಿಸಲು ಬಳಸುತ್ತವೆ. ಇವುಗಳು ಸಂದೇಶ ಕಳುಹಿಸುವವರ ಬ್ರ್ಯಾಂಡ್ ಅಥವಾ ಹೆಸರನ್ನು ಪ್ರತಿನಿಧಿಸುವ ಸಂಖ್ಯೆಗಳು ಅಥವಾ ಅಕ್ಷರಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ ಕೆನರಾ ಬ್ಯಾಂಕ್‌ ಕಳುಹಿಸುವ ಸಂದೇಶಗಳು AX-CANBNK ಎಂಬ ಹೆಡರ್‌ ಹೊಂದಿರುತ್ತವೆ.

ಭಾರತೀಯ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ತಮ್ಮ ತನಿಖೆಯ ಸಮಯದಲ್ಲಿ ಹೆಡರ್‌ಗಳು ಚೀನಾದಿಂದ ಬಂದಿವೆ ಎಂದು ಕಂಡುಹಿಡಿದಿದೆ. ಇವುಗಳು ಗ್ರಾಹಕರಿಗೆ ಬೇರೆ ಬೇರೆ ಕಂಪನಿಗಳ ಹೆಸರಿನಲ್ಲಿ ದುರುದ್ದೇಶಪೂರಿತ ಲಿಂಕ್‌ ಗಳನ್ನು ಕಳಿಸಿ ಅವುಗಳನ್ನು ಕ್ಲಿಕ್‌ ಮಾಡಿದರೆ ಈ ಲಿಂಕ್‌ಗಳು ಹ್ಯಾಕರ್‌ಗೆ ವ್ಯಕ್ತಿಯ ಫೋನ್‌ಗೆ ಪ್ರವೇಶವನ್ನು ಪಡೆಯಲು ಕಾರಣವಾಗುತ್ತವೆ. ಇದು ಹಣವಂಚನೆಯಂತಹ ಸೈಬರ್‌ ಕ್ರೈಮ್‌ ಗೆ ದಾರಿ ಮಾಡಿಕೊಡುತ್ತವೆ.

ಇಂತಹ ವಂಚನೆಯು ಕಳೆದ 3 ವರ್ಷಗಳಿಂದ ನಡೆಯುತ್ತಿತ್ತು ಎಂಬ ಅಂಶವನ್ನು ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ತನಿಖೆಯ ವೇಳೆ ಬಹಿರಂಗ ಪಡಿಸಿದೆ.
ನಿರ್ಬಂಧಿಸಲಾದ ಎಲ್ಲಾ ಹೆಡರ್‌ಗಳ ಐಪಿ ವಿಳಾಸಗಳು ಚೀನಾದಲ್ಲಿ ಟ್ರೇಸ್‌ ಆಗಿವೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!