ದಾವೂದ್ ಇಬ್ರಾಹಿಂ ಜೊತೆ ನಂಟು: ಕ್ರಿಮಿನಲ್​ ರಾಹುಲ್​​ ಭಾಟಿಯಾ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಉದ್ಯಮಿ, ಕ್ರಿಮಿನಲ್​ ರಾಹುಲ್​​ ಭಾಟಿಯಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಇತ ಸುಲಿಗೆ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿದ್ದು, ಹಲವು ದಿನಗಳಿಂದ ಹುಡುಕಾಟ ನಡೆಸಲಾಗಿತ್ತು.

ವರ್ಸೋವಾದ ಉದ್ಯಮಿಯೊಬ್ಬರನ್ನು ಬೆದರಿಸಿ ಅವರಿಂದ 30 ಲಕ್ಷ ರೂಪಾಯಿ ಮೌಲ್ಯದ ಕಾರು ಮತ್ತು 7.5 ಲಕ್ಷ ರೂಪಾಯಿ ಮೌಲ್ಯದ ನಗದು ಹಣಕ್ಕಾಗಿ ರಾಹುಲ್​​​ ಭಾಟಿಯಾ ಬೇಡಿಕೆಯಿಟ್ಟಿದ್ದ. ಅಲ್ದೇ, ಮೋಸ್ಟ್​ ವಾಂಟೆಡ್​ ಟೆರರ್​ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಛೋಟಾ ಶಕೀಲ್ ಮತ್ತು ಆತನ ಸಂಬಂಧಿ ಸಲೀಂ ಫ್ರೂಟ್ ಜೊತೆಗೂ ಈತ ನಂಟು ಬೆಳೆಸಿಕೊಂಡಿದ್ದನು.

ಈತನ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲೂ ಮೂವರ ಹೆಸರು ನಮೂದಿಸಲಾಗಿದೆ.
ಇಂದು ದಾಳಿ ನಡೆಸಿದ ಮುಂಬೈ ಅಪರಾಧ ವಿಭಾಗದ ಸುಲಿಗೆ ವಿರೋಧಿ ಸೆಲ್ (ಎಇಸಿ) ಆರೋಪಿ ರಾಹುಲ್​​​ ಭಾಟಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಟೆರರ್​​ ಸಪೋರ್ಟರ್​ ರಾಹುಲ್​​ 2015 ಮತ್ತು 2020 ರಲ್ಲಿ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿಕೊಂಡು ದೇಶದಿಂದ ಪಲಾಯನ ಮಾಡಲು ಪ್ರಯತ್ನ ಕೂಡ ನಡೆಸಿದ್ದನು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!