ಐಸಿಸ್​ ಉಗ್ರರ ಜತೆ ನಂಟು: ಭಟ್ಕಳ, ತುಮಕೂರಿನಿಂದ ಮೂವರ ವಶಕ್ಕೆ ಪಡೆದ ಎನ್ಐಎ

ಹೊಸದಿಗಂತ ವರದಿ,ತುಮಕೂರು:

ಐಸಿಸ್​ ಉಗ್ರ ಸಂಘಟನೆ ಜತೆ ನಂಟಿನ ಶಂಕೆ ಹಿನ್ನೆಲೆ ತುಮಕೂರಿನ‌ ಮರಳೂರು ದಿಣ್ಣೆ ಮೂಲದ ನಿವಾಸಿ ಮನೆ ಮೇಲೆ ಭಾನುವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ ಎನ್ಐಎ ಅಧಿಕಾರಿಗಳು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ತುಮಕೂರಲ್ಲಿ ದೆಹಲಿ ಹಾಗೂ ಬೆಂಗಳೂರು ಮೂಲದ ಎನ್ಐಎ ಅಧಿಕಾರಿಗಳ ತಂಡದಿಂದ ದಾಳಿ ಮಾಡಿದೆ. ತುಮಕೂರು ಎಚ್​ಎಂಎಸ್​ ಯುನಾನಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೆಡಿಕಲ್​ ವಿದ್ಯಾರ್ಥಿ ತುಮಕೂರಿನ ಮರಳೂರು ದಿಣ್ಣೆಯಲ್ಲಿ ವಾಸವಿದ್ದ ಎನ್ನಲಾಗಿದೆ. ಕಾಲೇಜಿನ ಮೇಲೂ ಎನ್​ಐಎ ದಾಳಿ ಮಾಡಿದೆ, ಈ ಕಾಲೇಜು ಮಾಜಿ ಶಾಸಕ ಡಾ.ರಫೀಕ್​ ಅಹ್ಮದ್​ ಅವರ ಒಡೆತನದಲ್ಲಿದೆ. ಎಚ್​ಎಂಎಸ್​ ಸಂಸ್ಥೆಗೆ ಸೇರಿದ ಕಟ್ಟಡವನ್ನು ಬಾಡಿಗೆ ಪಡೆದು ಮುಂಬೈ ಮೂಲದವರು ಕಾಲೇಜು ನಡೆಸುತ್ತಿದ್ದಾರೆ.

ಭಟ್ಕಳದ ಮನೆಯೊಂದರ ಮೇಲೂ ದಾಳಿ ಮಾಡಿರುವ ಎನ್​ಐಎ ಅಧಿಕಾರಿಗಳು ಯುವಕರಿಬ್ಬರನ್ನ ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!