VIRAL VIDEO| ಕೂಲಿಂಗ್‌ ಗ್ಲಾಸ್‌ ಧರಿಸಿ ಸ್ಕೂಟಿ ಮೇಲೆ ಸಿಂಹದ ಕರಾಮತ್ತು?!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕ ಜನರು ತಮ್ಮ ಮನೆಯಲ್ಲಿ ನಾಯಿ ಮತ್ತು ಬೆಕ್ಕುಗಳನ್ನು ಸಾಕಲು ಬಯಸುತ್ತಾರೆ, ಆದರೆ ಸಿಂಹ, ಹುಲಿ, ಚಿರತೆ ಸಾಕಲು ಹಿಂದೇಟು ಹಾಕುತ್ತಾರೆ. ಕೆಲವು ದೇಶಗಳಲ್ಲಿ ಮನೆಗಳಲ್ಲಿಯೂ ಸಿಂಹ ಮತ್ತು ಚಿರತೆಗಳನ್ನು ಸಾಕುತ್ತಾರೆ. ಆದರೆ ಈಗ ಈ ವೀಡಿಯೋ ನೋಡಿದರೆ ಸಿಂಹವನ್ನು ಯಾರೋ ವಾಕಿಂಗ್ ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಅನಿಸಬೇಕು.

ವೀಡಿಯೋದಲ್ಲಿ ಸಿಂಹ ಕೂಲಿಂಗ್‌ ಗ್ಲಾಸ್‌ ಧರಿಸಿ ಬೈಕ್ ಮೇಲೆ ಕುಳಿತಂತೆ ಕಾಣಿಸುತ್ತಿದೆ. ಹಿಂದಿನಿಂದ ನೋಡಿದಾಗ ಸಿಂಹದಂತಹ ಮೈಬಣ್ಣ ಮತ್ತು ತಲೆಯಿಂದ ಕುತ್ತಿಗೆಯವರೆಗೆ ಭಾರವಾದ ಕೂದಲು ಕಾಣುತ್ತದೆ. ಆದರೆ ಕ್ಯಾಮೆರಾವನ್ನು ಹಿಂದಿನಿಂದ ಮುಂಭಾಗಕ್ಕೆ ಸರಿಸಿದಾಗ ನಮಗೆ ನಿಜವಾದ ವಿಷಯ ಗೊತ್ತಾಗುತ್ತದೆ.

ಕ್ಯಾಮರಾ ಮುಂದಕ್ಕೆ ಹೋದಂತೆ ಕನ್ನಡಕ ಹಾಕಿಕೊಂಡು ಕುಳಿತಿರುವುದು ಸಿಂಹವಲ್ಲ..ನಾಯಿ ಎಂದು. ನಾಯಿಯನ್ನು ಸಿಂಹದಂತೆ ಅಲಂಕರಿಸಿ ಆಚೆ ಕರೆದುಕೊಂಡು ಬಂದಿದ್ದಾರೆ. ಹಿಂದಿನಿಂದ ನಾಯಿಯನ್ನು ನೋಡಿದ ಜನರು ಮೊದಲು ಸಿಂಹವೆಂದು ಹೆದರಿದ್ದಂತೂ ಸತ್ಯ.

ಇದುವರೆಗೆ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದು ದುಬೈನಲ್ಲಿ ನಡೆದಿದೆಯಂತೆ. ಈ ವಿಡಿಯೋ ನೋಡಿದ ಕೆಲವರು ಚೆನ್ನಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನು ಕೆಲವರು ನಿಮ್ಮ ಮೋಜಿಗಾಗಿ ಮೂಕ ಜೀವಿಗಳಿಗೆ ಈ ರೀತಿ ನೋಯಿಸಬೇಡಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!