Thursday, June 1, 2023

Latest Posts

ಹಾಲಿನ ನದಿಯಂತಹ ಮಥುರಾದಲ್ಲಿ ಮದ್ಯ-ಮಾಂಸ ಮಾರಾಟ ನಿಷೇಧ: ಯೋಗಿ ಆದಿತ್ಯನಾಥ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರ ಪ್ರದೇಶ ಮೇ 4 ಹಾಗೂ 11 ರಂದು ಎರಡು ಹಂತದಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಶುಕ್ರವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಥುರಾ, ಫಿರೋಜಾಬಾದ್‌ ಹಾಗೂ ಆಗ್ರಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

2017ಕ್ಕೂ ಮುನ್ನ ಮಥುರಾ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಮಾಡುತಿದ್ದರು. ಆದ್ರೆ ಆ ಬಳಿಕ ನಿಷೇಧ ಮಾಡಿದೇವು . ಯಾಕೆ ಗೊತ್ತಾ ?, ಇದಕ್ಕೂ ಕಾರಣವಿದೆ ಎಂದು ಹಿಂದಿನ ಕಾರಣವನ್ನೂ ಯೋಗಿ ತಿಳಿಸಿದರು.

ಈ ನಗರ ಹಿಂದೆ ಹಾಲಿನ ನದಿ ಎಂದು ಗುರುತಿಸಿಕೊಂಡಿತ್ತು . ಅದಕ್ಕಾಗಿ ಮದ್ಯ ಮತ್ತು ಮಾಂಸ ಮಾರಾಟ ಮಾಡುವ ಜನರಿಗೆ ಮಿಲ್ಕ್‌ಶೇಕ್‌ಗಳು, ತರಕಾರಿಗಳನ್ನು ಮಾರಾಟ ಮಾಡುವಂತೆ ಹೇಳಿದ್ದೇವೆ ಮತ್ತು ಪವಿತ್ರ ನಗರದ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಹಿನ್ನಡೆಯಾಗಬಾರದುಎಂದು ಅವರು ಹೇಳಿದರು. ಈ ಮೂಲಕ ಬಿಜೆಪಿ ಸರಕಾರ ಯಾರಿಗೂ ತಾರತಮ್ಯ ಮಾಡೋದಿಲ್ಲ, ಹಾಗೆ ಅರಾಜಕತೆಗೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಹೇಳಿದರು.

ಈ ಹಿಂದೆಉತ್ತರ ಪ್ರದೇಶದಲ್ಲಿ ಜನರು ಗನ್‌ಗಳನ್ನು ಹಿಡಿದುಕೊಂಡು ಜನರ ಸುಲಿಗೆ ಮಾಡುತ್ತಿದ್ದರು. ಇಂದು ಟ್ಯಾಬ್ಲೆಟ್‌ಗಳನ್ನು ಹಿಡಿದು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ 2 ಕೋಟಿಗೂ ಅಧಿಕ ಟ್ಯಾಬ್ಲೆಟ್‌ಗಳನ್ನು ನೀಡಿದ್ದೇವೆ ಎಂದರು.

ಇಂದು, ಅಭಿವೃದ್ಧಿಯನ್ನು ದೊಡ್ಡ ಪ್ರಮಾಣದಲ್ಲಿ ಯೋಜಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗುತ್ತಿದೆ. ಈಗ, ಚೌರಾಸಿ ಕೋಸಿ ಪರಿಕ್ರಮವು ಕೇವಲ ಅಯೋಧ್ಯಾ ಧಾಮದಲ್ಲಿ ನಡೆಯುವುದಿಲ್ಲ ಆದರೆ ಬ್ರಜಧಾಮದಲ್ಲೂ ನಡೆಯುತ್ತದೆ” ಎಂದು ಯೋಗಿ ಹೇಳಿದರು.

ಪ್ರಗತಿಗಾಗಿ ಟ್ರಿಪಲ್ ಇಂಜಿನ್ ಸರ್ಕಾರ ರಚಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಮನವಿ ಮಾಡಿದರು. ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ರ ಸಂದರ್ಭದಲ್ಲಿ ಯುಪಿ 35 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾಪಗಳನ್ನು ಸ್ವೀಕರಿಸಿದೆ ಎಂದು ಸೂಚಿಸಿದ ಅವರು, ಇದು ಬ್ರಜ್ ಪ್ರದೇಶದಲ್ಲಿ 50,000 ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಯುಪಿಯಲ್ಲಿನ ನಗರಗಳು ಸ್ಮಾರ್ಟ್ ಸಿಟಿಗಳಾಗಿ ರೂಪಾಂತರಗೊಳ್ಳುತ್ತಿವೆ ಮತ್ತು ಕಸದ ತೊಟ್ಟಿಗಳು ಎಂಬ ಹಿಂದಿನ ಕುಖ್ಯಾತಿಯನ್ನು ಹೊಡೆದುಹಾಕಿದೆ ಎಂದರು. ಈಗ ಆಗ್ರಾದ ಚಿತ್ರಣವೇ ಬದಲಾಗಿದೆ. ಆರು ವರ್ಷಗಳ ಹಿಂದೆ ಎಲ್ಲೆಂದರಲ್ಲಿ ಕಸದ ರಾಶಿ ಇದ್ದವು. ಈಗ ಹಾಗಿಲ್ಲ. ಶೀಘ್ರದಲ್ಲೇ ಆಗ್ರಾಕ್ಕೂ ಮೆಟ್ರೋ ಉಡುಗೊರೆ ಸಿಗಲಿದೆ ಎಂದು ಹೇಳಿದರು. ಭಾರತ ಇಂದು ಬದಲಾಗಿದೆ ಮತ್ತು ನಾವು ಈ ಬದಲಾವಣೆಯ ಪ್ರಕ್ರಿಯೆಗೆ ಸೇರಬೇಕು. ಇಂದು, ಪ್ರಮುಖ ಮೂಲಸೌಕರ್ಯ ಮತ್ತು ವಿಮಾನ ನಿಲ್ದಾಣಗಳು, ಐಐಟಿಗಳು ಮತ್ತು ಏಮ್ಸ್‌ನಂತಹ ನಿರ್ಮಾಣ ಯೋಜನೆಗಳು ನಿಗದಿತ ಅವಧಿಯೊಳಗೆ ಪೂರ್ಣಗೊಂಡಿವೆ.ಕಾಶಿ, ಅಯೋಧ್ಯೆ, ಕೇದಾರನಾಥ ಮತ್ತು ಮಹಾಕಾಲ್ ಮುಂತಾದ ಸ್ಥಳಗಳು ಪರಂಪರೆಯ ಗೌರವದಿಂದಾಗಿ ಪುನಶ್ಚೇತನಗೊಂಡಿವೆ. ಇದು ಹೊಸ ಭಾರತ’ ಎಂದು ಹೇಳಿದರು. ಬರ್ಸಾನಾ, ಗೋಕುಲ ಮತ್ತು ಗೋವರ್ಧನ ವೈಭವವನ್ನು ಮರಳಿ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!