ಮದ್ಯ ಸಾಗಣೆ ಪ್ಯಾಜೋ- ಎತ್ತಿನ ಗಾಡಿ ಡಿಕ್ಕಿ: 70 ಸಾವಿರ ಮೌಲ್ಯದ ಮದ್ಯ ಹಾನಿ

ಹೊಸದಿಗಂತ ವರದಿ,ವಿಜಯಪುರ:

ಮದ್ಯ ಸಾಗಣೆ ಪ್ಯಾಜೋ ಹಾಗೂ ಎತ್ತಿನ ಗಾಡಿ ಡಿಕ್ಕಿಯಾಗಿ ಸುಮಾರು 70 ಸಾವಿರ ಮೌಲ್ಯದ ಮದ್ಯ ಹಾನಿಯಾಗಿರುವ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕು ಬಳಿಯ ಮುಳವಾಡ ಕ್ರಾಸ್ ಹತ್ತಿರದ ಹೆದ್ದಾರಿಯಲ್ಲಿ ನಡೆದಿದೆ.

ಮುಳವಾಡದ ಶ್ರೀಶೈಲ ಕಳಸಗೊಂಡು ತನ್ನ ಜಮೀನಿನಿಂದ ಎತ್ತಿನ ಗಾಡಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ವಿಜಯಪುರದಿಂದ ಕೊಲ್ಹಾರದ ಲಕ್ಕಿ ಬಾರ್’ಗೆ ಮದ್ಯ ಸಾಗಣೆ ಮಾಡುತ್ತಿದ್ದ ಪ್ಯಾಜೋ ಹಿಂದಿನಿಂದ ಡಿಕ್ಕಿಯಾಗಿದ್ದು, 2.15 ಲಕ್ಷ ರೂ. ಮೌಲ್ಯದ ಮದ್ಯದಲ್ಲಿ ಸುಮಾರು 70 ಸಾವಿರ ಮದ್ಯ ಹಾನಿಯಾಗಿದೆ.

ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!