ಕೇಂದ್ರ ಸರ್ಕಾರದಿಂದ ಅಗತ್ಯ ಔಷಧಿಗಳ ಪಟ್ಟಿ ರಿಲೀಸ್: 34 ಹೊಸ ಔಷಧಗಳು ಸೇರ್ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022 ಬಿಡುಗಡೆ ಮಾಡಿದೆ. ಇದರಲ್ಲಿ 34 ಹೊಸ ಔಷಧಿಗಳು ಸೇರಿದ್ದು, ಈ ಮೂಲಕ ಒಟ್ಟು ಔಷಧಿಗಳ ಸಂಖ್ಯೆ 384ಕ್ಕೆ ಏರಿದೆ.

ಐವರ್ಮೆಕ್ಟಿನ್, ಮುಪಿರೋಸಿನ್ ಮತ್ತು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿಯಂತಹ ಕೆಲವು ಸೋಂಕು-ನಿರೋಧಕಗಳು ಸೇರಿದಂತೆ ಮೂವತ್ತನಾಲ್ಕು ಹೊಸ ಔಷಧಿಗಳನ್ನ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ 2022ರ ಪಟ್ಟಿಗೆ ಸೇರಿಸಲಾಗಿದೆ.

 

ಕ್ಯಾನ್ಸರ್ ವಿರೋಧಿ, ಹಲವಾರು ಪ್ರತಿಜೀವಕಗಳು ಮತ್ತು ಲಸಿಕೆಗಳನ್ನ ಪಟ್ಟಿಗೆ ಸೇರಿಸುವುದರೊಂದಿಗೆ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಈಗ ರೋಗಿಗಳಿಗೆ ಹೆಚ್ಚು ಪ್ರಮುಖ ಔಷಧಿಗಳು ಕೈಗೆಟುಕುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
‘ಹಲವಾರು ಪ್ರತಿಜೀವಕಗಳು, ಲಸಿಕೆಗಳು, ಕ್ಯಾನ್ಸರ್ ವಿರೋಧಿ ಔಷಧಿಗಳು ಮತ್ತು ಇತರ ಅನೇಕ ಪ್ರಮುಖ ಔಷಧಿಗಳು ಹೆಚ್ಚು ಕೈಗೆಟುಕುವ ದರದಲ್ಲಿರುತ್ತವೆ’ ಎಂದು ಮನ್ಸುಖ್ ಮಾಂಡವಿಯಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!