April 16, 2026
Thursday, April 16, 2026
spot_img

ಲವ್ ಬರ್ಡ್ಸ್ ಇಲ್ಲಿ ಕೇಳಿ..! ನಾಳೆ ನಂದಿಬೆಟ್ಟಕ್ಕೆ ‘ನೋ ಎಂಟ್ರಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೇಮಿಗಳ ದಿನದಂದು ಪ್ರವಾಸಕ್ಕೆ ನಂದಿಬೆಟ್ಟಕ್ಕೆ ಹೋಗುವವರಿಗೆ ಬ್ಯಾಡ್ ನ್ಯೂಸ್. ಫೆಬ್ರವರಿ 14 ರಂದು ಬೆಟ್ಟಕ್ಕೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗುವುದಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ. ಜನಸಂದಣಿ, ಪರಿಸರ ಹಾನಿ ಹಾಗೂ ಭದ್ರತಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಜಾರಿಗೊಂಡಿದೆ ಎಂದು ಉಪ ಆಯುಕ್ತರು ತಿಳಿಸಿದ್ದಾರೆ.

ಹಿಂದಿನ ವರ್ಷಗಳಲ್ಲಿ ಪ್ರೇಮಿಗಳ ದಿನದಂದು ನಡೆದ ಆತ್ಮಹತ್ಯೆ ಪ್ರಕರಣಗಳು ಹಾಗೂ ಹೆಚ್ಚುತ್ತಿರುವ ಅವ್ಯವಸ್ಥೆಯನ್ನು ಪರಿಗಣಿಸಿ, ಪೊಲೀಸ್ ವರದಿ ಆಧಾರವಾಗಿ ನಿರ್ಬಂಧ ವಿಧಿಸಲಾಗಿದೆ. ಸಾಮಾನ್ಯ ವಾರಾಂತ್ಯಗಳಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಒಂದೇ ಸಂಪರ್ಕ ರಸ್ತೆ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ ನಿಯಂತ್ರಣ ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

ಈ ಬಾರಿ ಪ್ರೇಮಿಗಳ ದಿನ ಶನಿವಾರ ಬಂದಿರುವುದರಿಂದ 15,000 ರಿಂದ 20,000 ಜನರು ಭೇಟಿ ನೀಡುವ ಸಾಧ್ಯತೆ ಇದೆ. ಇದರಿಂದ ಪರಿಸರ ಮಾಲಿನ್ಯ, ಮದ್ಯದ ಗದ್ದಲ ಮತ್ತು ಕಸದ ಸಮಸ್ಯೆಗಳು ಹೆಚ್ಚಾಗಬಹುದು ಎನ್ನಲಾಗಿದೆ. ಹೀಗಾಗಿ ಶಾಂತಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ರವೇಶ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !