ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಾಯಾಮ ಮಾಡುವುದು ದೇಹಕ್ಕೆ ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ದೇಹಕ್ಕೆ ವಿಶ್ರಾಂತಿ ನೀಡುವುದು ಕೂಡ ಅಷ್ಟೇ ಮುಖ್ಯ. ನಿರಂತರವಾಗಿ ಜಿಮ್ನಲ್ಲಿ ಕಷ್ಟಪಡುವುದರಿಂದ ಸ್ನಾಯುಗಳು ದಣಿಯುತ್ತವೆ. ಈ 7 ಸಂದರ್ಭಗಳಲ್ಲಿ ಜಿಮ್ಗೆ ಹೋಗದೆ ವಿಶ್ರಾಂತಿ ಪಡೆಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಸ್ನಾಯು ನೋವು
ವ್ಯಾಯಾಮ ಮಾಡಿದ ಮರುದಿನ ಸ್ನಾಯುಗಳು ವಿಪರೀತ ನೋಯುತ್ತಿದ್ದರೆ, ದೇಹವು ತನಗೆ ವಿಶ್ರಾಂತಿ ಬೇಕು ಎಂದು ಸೂಚಿಸುತ್ತಿದೆ ಎಂದರ್ಥ. ಈ ಸಮಯದಲ್ಲಿ ವಿಶ್ರಾಂತಿ ನೀಡಿದರೆ ಮಾತ್ರ ಸ್ನಾಯುಗಳು ಬಲಗೊಳ್ಳುತ್ತವೆ.
ವಿಪರೀತ ಆಯಾಸ
ರಾತ್ರಿ ಸರಿಯಾಗಿ ನಿದ್ದೆ ಬಾರದೆ, ಬೆಳಿಗ್ಗೆ ಎದ್ದಾಗ ದೇಹದಲ್ಲಿ ಶಕ್ತಿಯೇ ಇಲ್ಲದಂತೆ ಅನಿಸಿದರೆ ಜಿಮ್ಗೆ ಹೋಗಬೇಡಿ. ಬಲವಂತವಾಗಿ ವ್ಯಾಯಾಮ ಮಾಡಲು ಹೋದರೆ ಗಾಯಗಳಾಗುವ ಅಪಾಯ ಹೆಚ್ಚಿರುತ್ತದೆ.
ಮಾನಸಿಕ ಒತ್ತಡ
ಕೆಲಸದ ಒತ್ತಡ ಅಥವಾ ಮನೆಯಲ್ಲಿನ ಚಿಂತೆಗಳಿಂದ ಮನಸ್ಸು ಸರಿ ಇಲ್ಲದಿದ್ದಾಗ ಜಿಮ್ಗೆ ವಿಶ್ರಾಂತಿ ನೀಡಿ. ಒಂದು ದಿನ ಪ್ರಕೃತಿಯ ಜೊತೆಕಾಲ ಕಳೆಯಿರಿ ನಡೆದಾಡುವುದು ಅಥವಾ ಯೋಗ ಮಾಡುವುದು ಮನಸ್ಸನ್ನು ಶಾಂತಗೊಳಿಸುತ್ತದೆ.
ಅನಾರೋಗ್ಯ ಬಂದಾಗ
ಸಾಮಾನ್ಯ ನೆಗಡಿ, ಜ್ವರ ಅಥವಾ ಕೆಮ್ಮು ಇದ್ದಾಗ ಜಿಮ್ಗೆ ಹೋಗಬಾರದು. ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಕ್ಷೀಣಿಸುವುದಲ್ಲದೆ, ಇತರರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಗಾಯಗಳಾದಾಗ
ಸಣ್ಣ ಪ್ರಮಾಣದ ಗಾಯ ಅಥವಾ ಕೀಲು ನೋವು ಕಾಣಿಸಿಕೊಂಡ ತಕ್ಷಣ ವ್ಯಾಯಾಮ ನಿಲ್ಲಿಸಬೇಕು. ನೋವನ್ನು ತಡೆದುಕೊಂಡು ಜಿಮ್ ಮಾಡಿದರೆ ಗಾಯ ಮತ್ತಷ್ಟು ದೊಡ್ಡದಾಗಬಹುದು.
ನಿರಂತರವಾಗಿ ತರಬೇತಿ
ವಾರದ 5-6 ದಿನಗಳು ಸತತವಾಗಿ ಕಠಿಣ ವ್ಯಾಯಾಮ ಮಾಡಿದ್ದರೆ, ವಾರದಲ್ಲೊಮ್ಮೆ ಅಥವಾ ಎರಡೆರಡು ದಿನಕ್ಕೊಮ್ಮೆ ದೇಹಕ್ಕೆ ಪೂರ್ಣ ಪ್ರಮಾಣದ ವಿಶ್ರಾಂತಿ ನೀಡುವುದು ಅತ್ಯಗತ್ಯ.
ಕೆಲಸದ ಒತ್ತಡ
ದಿನನಿತ್ಯದ ಕೆಲಸಗಳಲ್ಲಿ ಸಮಯ ಸಾಲದೆ ಗಡಿಬಿಡಿಯಲ್ಲಿ ಜಿಮ್ಗೆ ಓಡುವುದಕ್ಕಿಂತ, ಆ ದಿನ ಪ್ರಶಾಂತವಾಗಿ ವಿಶ್ರಾಂತಿ ಪಡೆದು ಮರುದಿನ ಉತ್ಸಾಹದಿಂದ ಜಿಮ್ಗೆ ಹಾಜರಾಗುವುದು ಒಳ್ಳೆಯದು.
ನೆನಪಿಡಿ.. ವಿಶ್ರಾಂತಿಯ ದಿನ ಎಂದರೆ ಇಡೀ ದಿನ ಹಾಸಿಗೆಯಲ್ಲಿ ಮಲಗುವುದಲ್ಲ, ಹಗುರವಾದ ನಡಿಗೆ ಅಥವಾ ಲಘು ವ್ಯಾಯಾಮ ಮಾಡುವ ಮೂಲಕವೂ ದಿನವನ್ನು ಸಕ್ರಿಯವಾಗಿರಿಸಿಕೊಳ್ಳಬಹುದು.



