ಏಷ್ಯಾದ ಅತೀ ದೊಡ್ಡ ಅಕ್ಷರ ಹಬ್ಬದಲ್ಲಿ ನಾಡಿನ ಕಳೆ ಹೆಚ್ಚಿಸಿದ್ದಾರೆ ಕಂಬಾರ, ಪೂರ್ಣಿಮಾ ಸುರೇಶ್ ಸಹಿತ ಸಾಹಿತ್ಯ ಪ್ರತಿಭೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಾಹಿತ್ಯ ಅಕಾಡೆಮಿ ಸಾರಥ್ಯದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಏಷ್ಯಾದ ಅತೀ ದೊಡ್ಡ ಅಕ್ಷರಗಳ ಹಬ್ಬ ಎಂಬ ಖ್ಯಾತಿಯ ‘ಫೆಸ್ಟಿವಲ್ ಆಫ್ ಲೆಟರ್ಸ್’ ಕನ್ನಡ, ತುಳು, ಕೊಡವ, ಬಂಜಾರ ಸಾಹಿತಿಗಳು ಪಾಲ್ಗೊಂಡಿದ್ದು, ನಾಡಿನ ಹಿರಿಮೆ ಹೆಚ್ಚಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ಲೇಖಕರಾದ ಚಂದ್ರಶೇಖರ ಕಂಬಾರ, ಪೂರ್ಣಿಮಾ ಸುರೇಶ್, ಎಚ್.ಎಸ್. ಶಿವಪ್ರಕಾಶ್, ಮನುಬಳಿಗಾರ್, ವಿವೇಕ ಶಾನುಭಾಗ, ಎಂ.ಎಸ್ ಆಶಾದೇವೀ, ಅಮರೇಶ ನುಗಡೋಣಿ, ಪದ್ಮಿನಿ ನಾಗರಾಜು, ಸಿದ್ಧಪ್ಪ ಸಿ. ಕೊಟರಗಸ್ತಿ, ರಮೇಶ್ ಅರೋಲಿ, ಕೇಶವ ಮಳಗಿ, ರೇಣುಕಾ ರಮಾನಂದ, ಜಯಶ್ರೀ ಕಂಬಾರ್, ಶೋಭಾ ನಾಯ್ಕ್, ಸಿದ್ಧರಾಮ ಹೊನ್ಕಲ್, ಚಂದ್ರಶೇಖರ ತಾಳ್ಯ, ಬೇಲೂರು ರಘುನಂದನ್, ಶಶಿ ತರೀಕೆರೆ, ಸಹನಾ ವಿಜಯಕುಮರ್, ಎ. ರೇವತಿ, ತುಳು ಲೇಖಕರಾದ ಅಕ್ಷತಾ ರಾಜ್ ಪೆರ್ಲ, ಅತ್ರಾಡಿ ಅಮೃತಾ ಶೆಟ್ಟಿ, ಕೊಡವ ಭಾಷೆ ಲೇಖಕರಾದ ಎಂ.ಪಿ. ರೇಖಾ, ಮುಳ್ಳೆಂಗದ ರೇವತಿ ಪೂವಯ್ಯ, ಬಂಜಾರ ಲೇಖಕರಾದ ಶಾಂತಾ ನಾಯ್ಕ್, ರಮೇಶ ಆರ್ಯ ಪಾಲ್ಗೊಳ್ಳಲಿದ್ದಾರೆ.

ಈ ಪೈಕಿ ಉಡುಪಿ ಜಿಲ್ಲೆಯ ಅಪ್ರತಿಮ ಪ್ರತಿಭೆ, ಕನ್ನಡ ಸಾಹಿತಿ, ಲೇಖಕಿ ಪೂರ್ಣಿಮಾ ಸುರೇಶ್ ಅವರು Ensemble of Image, Rhythm and Beauty: Multilingual Poetry Readings ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭ ಕೆ.ವಿ. ನಾರಾಯಣ ಅವರಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅವರ ‘ನುಡಿಗಳ ಅಳಿವು’ ಕನ್ನಡ ಪುಸ್ತಕಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!