ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಗಳ್ಳರು ಈ ಪುಟಾಣಿಯನ್ನು ನೋಡಿ ಕಲಿಯೋದು ಸಾಕಷ್ಟಿದೆ. ಮಕ್ಕಳು ಸಾಮಾನ್ಯವಾಗಿ ಚೇಷ್ಟೆ, ಕೀಟಲೆ ಮಾಡುವ ಮುದ್ದು ಮುದ್ದಾದ ವಿಡಿಯೋಗಳು ಎಲ್ಲೆಡೆ ಕಾಣಸಿಗುತ್ತವೆ. ಆದರೆ ಪುಟ್ಟ ಮಕ್ಕಳು ಶ್ರಮವಹಿಸಿ ಕೆಲಸ ಮಾಡೋದನ್ನು ಕಾಣೋದು ತೀರಾ ವಿರಳ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತನ್ನ ತಾಯಿಗೆ ಮಗು ಸಹಾಯ ಮಾಡಿರುವುದನ್ನು ಕಾಣಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.
ಭಾರತೀಯ ಪೊಲೀಸ್ ಸೇವೆಯ (IPS) ಅಧಿಕಾರಿ ದೀಪಾಂಶು ಕಾಬ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸು, ಎತ್ತರ ಕಡಿಮೆ ಇರಬಹುದು, ಆದರೆ “ಸಹಾಯದ ಭಾವನೆ” ಹೆಚ್ಚು. ಪಾಲಕರು ಅಮೂಲ್ಯವಾದ ರತ್ನವನ್ನು ಪಡೆದಿದ್ದಾರೆ ಎಂಬ ಶೀರ್ಷಿಕೆ ನೀಡಿದ್ದಾರೆ. ವ್ಯಾನ್‌ನಲ್ಲಿದ್ದ ಖಾಲಿ ನೀರಿನ ಕ್ಯಾನ್‌ಗಳನ್ನು ತಂದು ಕೋಣೆಯಲ್ಲಿ ಇಡುತ್ತಾ ತನ್ನ ತಾಯಿಗೆ ಸಹಾಯ ಮಾಡಿದೆ. ಈ ವಿಡಿಯೋದಲ್ಲಿ ಮಗುವಿನ ನಡಿಗೆ, ಓಟ, ಚಲನವಲನಗಳು ನೆಟ್ಟಿಗರ ಮನಸೆಳೆಯುತ್ತಿವೆ.
उम्र और कद भले छोटा है,
पर "मदद की भावना" बहुत उंची है.माता-पिता ने नायाब हीरा ताराशा है… pic.twitter.com/ySun6A5hEC
— Dipanshu Kabra (@ipskabra) February 14, 2023