ಎಲ್ಲಾ ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ನೇರ ಪ್ರಸಾರ: UGC ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-3 (Chandrayan-3) ಲ್ಯಾಂಡಿಂಗ್ ಗೆ ಕ್ಷಣಗಣನೆ ಬಾಕಿ ಉಳಿದಿದ್ದು, ಈ ಕ್ಷಣಕ್ಕಾಗಿ ಎಲ್ಲರ ಚಿತ್ತ ನೆಟ್ಟಿದೆ. ಹೀಗಾಗಿ ಎಲ್ಲಾ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ನೇರ ಪ್ರಸಾರ ವೀಕ್ಷಿಸಲು ಅವಕಾಶ ಕಲ್ಪಿಸುಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ಸೂಚನೆ ನೀಡಿದೆ.

ಆಗಸ್ಟ್ 23 ರಂದು ಸಂಜೆ 5.30 – 6.30 ರವರೆಗೆ ನಡೆಯುವ ಚಂದ್ರಯಾನ -3 ಲ್ಯಾಂಡಿಂಗ್ ವೀಕ್ಷಿಸಲು ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಲು ಹೇಳಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತದಲ್ಲಿ ವಿಜ್ಞಾನ ಬೆಳೆದುಬಂದ ಹಾದಿಯ ಬಗ್ಗೆ ಅರಿವು ಮೂಡಿಸುವ, ಬಾಹ್ಯಾಕಾಶ ಕ್ಷೇತ್ರದ ಸಾಧನೆ ಹಾಗೂ ದೇಶದ ಸಾಧನೆಯ ಬಗ್ಗೆ ಹೆಮ್ಮೆಪಡುವಂತೆ ಮಾಡುವ ಉದ್ದೇಶ ಹೊಂದಿದೆ.

ಚಂದ್ರಯಾನ-3 ಲ್ಯಾಂಡಿಂಗ್ ಐತಿಹಾಸಿಕ ಕ್ಷಣ ವಿದ್ಯಾರ್ಥಿಗಳಲ್ಲಿ ಹೊಸದನ್ನು ಶೋಧಿಸುವ ಮನೋಭಾವವನ್ನೂ ಬೆಳೆಸುತ್ತದೆ ಎಂದು ಯುಜಿಸಿ ಹೇಳಿದೆ.

ಈ ಮಧ್ಯೆ ಉತ್ತರ ಪ್ರದೇಶ ಸರ್ಕಾರವು ಆಗಸ್ಟ್ 23 ರಂದು 5.15 ರಿಂದ 6.15ರ ವರೆಗೆ ನಡೆಯಲಿರುವ ಚಂದ್ರಯಾನದ ಲ್ಯಾಂಡಿಂಗ್ ವೀಕ್ಷಿಸಲು ಒಂದು ಗಂಟೆ ಶಾಲಾ ಅವಧಿಯನ್ನೂ ಹೆಚ್ಚಿಸಿದೆ.

ಚಂದ್ರಯಾನ -3 ಸಾಫ್ಟ್ ಲ್ಯಾಂಡಿಗ್ ಆಗಸ್ಟ್ 23ರಂದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಾಗಲಿದೆ. ಇಸ್ರೋ ವೆಬ್​​ಸೈಟ್ (https://www.isro.gov.in/), ಇಸ್ರೋ ಅಧಿಕೃತ (ISRO Official) ಯೂಟ್ಯೂಬ್ ಚಾನೆಲ್, ಇಸ್ರೋ ಫೇಸ್ ಬುಕ್ (https://www.facebook.com/ISRO)ಚಾನೆಲ್ ಹಾಗೂ ಡಿಡಿ ನ್ಯಾಷನಲ್ ಚಾನೆಲ್​ಗಳಲ್ಲಿ ನೇರ ಪ್ರಸಾರಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!